ಸುದ್ದಿ ಕಣಜ.ಕಾಂ | SHIVAMOGGA CITY NEWS
ಶಿವಮೊಗ್ಗ: ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಆಟೋ ಚಾಲಕರ ಮಹತ್ವದ ಸಭೆ ಜರುಗಿತು. ಅಲ್ಲಿ ಆಟೋ ಚಾಲಕರ ಕುಂದುಕೊರತೆಗಳನ್ನು ಆಲಿಸಿದರು. ಚಾಲಕರಿಗೆ ಎಂಟು ಸೂಚನೆಗಳನ್ನು ನೀಡಿದ್ದಾರೆ.
READ | ಬೇಕರಿ, ಹೋಟೆಲ್ ಮಾಲೀಕರೇ ಎಚ್ಚರ! ಇದು ಫೇಕ್ ಫುಡ್ ಆಫಿಸರ್ ಕಥೆ
ಆಟೋ ಚಾಲಕರಿಗೆ ಎಸ್ಪಿ ನೀಡಿದ ಸೂಚನೆಗಳಿವು
- ಕನಿಷ್ಠ ದರವನ್ನು ನಿಗದಿಪಡಿಸಿದ ನಂತರ ಎಲ್ಲ ಆಟೋಗಳಿಗೆ ಕಡ್ಡಾಯವಾಗಿ ಮೀಟರ್’ಗಳನ್ನು ಅಳವಡಿಸಿಕೊಳ್ಳಬೇಕು.
- ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸುವುದು.
ಶಿಸ್ತಿನ ಸಂಬಂಧ ಆಟೋ ಚಾಲಕರು, ಚಾಲನೆಯ ವೇಳೆಯಲ್ಲಿ ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವುದು. - ಎಲ್ಲ ಆಟೋಗಳಿಗೆ ಚಾಲಕರ ಮಾಹಿತಿ ಮತ್ತು ಕ್ಯೂ.ಆರ್. ಕೋಡ್ ಹೊಂದಿರುವ ಡಿಸ್ ಪ್ಲೇ ಕಾರ್ಡ್ ಅನ್ನು ಇಲಾಖೆ ವತಿಯಿಂದ ಉಚಿತವಾಗಿ ನೀಡಲಿದ್ದು, ಅದನ್ನು ಡಿಸ್ ಪ್ಲೇ ಕಾರ್ಡ್ ಅನ್ನು ಎಲ್ಲ ಆಟೋಗಳಲ್ಲಿ ಅಳವಡಿಸಿಕೊಳ್ಳುವುದು.
- ಆಟೋ ಚಾಲಕರು ನೀಡುವ ದಾಖಲಾತಿಗಳನ್ನು ಪರಿಶೀಲಿಸಿ ಪ್ರತಿ ಆಟೋಗಳಿಗೆ ಎಸ್.ಎಂ.ಜಿ ನಂಬರ್ ಅನ್ನು ನೀಡಲಾಗುವುದು. ನಂತರ ಎಸ್ಎಂಜಿ ನಂಬರ್ ಇರುವ ಸ್ಟಿಕ್ಕರ್’ಗಳನ್ನು ಪ್ರತಿ ಆಟೋ ಚಾಲಕರು ತಮ್ಮ ತಮ್ಮ ಆಟೋಗಳಲ್ಲಿ, ಕಾಣುವ ರೀತಿಯಲ್ಲಿ ಅಂಟಿಸಿಕೊಳ್ಳುವುದು.
- ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆನಿಲ್ದಾಣದಿಂದ ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ದೂರುಗಳು ಬರುತ್ತಿದ್ದು, ಇದೇ ರೀತಿ ದೂರುಗಳು ಪುನರಾವರ್ತಿತವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
- ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡವುದು.
- ಆಟೋಗಳನ್ನು ಆಟೋ ನಿಲ್ದಾಣವಲ್ಲದೇ ಬೇರೆ ಸ್ಥಳಗಳಲ್ಲಿ ನಿಲುಗಡೆ ಮಾಡುವಂತಿಲ್ಲ. ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಾಟೆ, ಡಿವೈಎಸ್ಪಿ ಪ್ರಭು, ಸಾರಿಗೆ ಇಲಾಖೆಯ ಅಧಿಕಾರಿಗಳು, ದೊಡ್ಡಪೇಟೆ, ಕೋಟೆ ಪೊಲೀಸ್ ಠಾಣೆಯ ಎಸ್ಐ, ನಗರದ ಆಟೋ ಚಾಲಕರುಗಳು ಉಪಸ್ಥಿತರಿದ್ದರು.
https://suddikanaja.com/2022/11/02/district-administration-deadline-to-fix-auto-meter-st-shimoga/