ಸುದ್ದಿ ಕಣಜ.ಕಾಂ | POLITICAL NEWS
ಶಿವಮೊಗ್ಗ(shivamogga): ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ `ಭಾರತ್ ಜೋಡೊ ಯಾತ್ರೆ’ಯಿಂದ ಪಕ್ಷಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ದೇಶದ ಪ್ರಧಾನಿಯೇ ಹಿಂದುಳಿದ ವರ್ಗದವರಿದ್ದಾರೆ. ಹೀಗಿರುವಾಗ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿರುವುದು ಬಿಡಬೇಕು. ಈ ಹಿಂದೆಯೂ ಹಿಂದುಳಿದ ವರ್ಗಕ್ಕೆ ಸೇರಿದವರು ಸಿಎಂ ಆಗಿದ್ದಾರೆ.
| ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವನಾಯಕರಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಗೆಲ್ಲಲಿದ್ದೇವೆ ಎಂದು ಹೇಳಿದರು.
ಆರೋಪ ಪ್ರತ್ಯಾರೋಪ ಕಾಮನ್
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, `ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಗಳು ಸಾಮಾನ್ಯ. ತನಿಖೆಯಿಂದ ಸತ್ಯಾಸತ್ಯತೆಗಳು ಗೊತ್ತಾಗಲಿವೆ’ ಎಂದರು.
READ | ಗಾಂಧಿ ಬಜಾರಿನಲ್ಲಿ ಬುಲ್ಡೋಜರ್ ಸದ್ದು, ತ್ರಿಮೂರ್ತಿಗಳಿಂದ ಭರ್ಜರಿ ಕಾರ್ಯಾಚರಣೆ