ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಚಾಕು ಒರಿದು ಕೊಲೆಗೈದ ಘಟನೆ ನಡೆದಿದೆ.
ದುಮ್ಮಳ್ಳಿಯ ಶೋಭಾ(50) ಮೃತರು. ಪತಿ ಪ್ರಕಾಶ್ ಹಾಗೂ ಶೋಭಾ ಸುಮಾರು 20 ವರ್ಷಗಳಿಂದ ಬೇರೆ ಬೇರೆ ವಾಸವಾಗಿದ್ದರು. ನಾಲ್ಕೈದುತಿಂಗಳುಗಳ ಹಿಂದೆ ಶೋಭಾ ಅವರ ಮಗನು ಅಪಘಾತದಲ್ಲಿ ಮೃತಪಟ್ಟಿದ್ದರು.
READ | ಭದ್ರಾವತಿ ಬೈಪಾಸ್’ನಲ್ಲಿ ಭೀಕರ ಅಪಘಾತ, ಪತಿಯ ನೋಡಲು ಹೋಗುತ್ತಿದ್ದ ಪತ್ನಿ ಅಪಘಾತದಲ್ಲಿ ಸಾವು
ಜಗಳ ವಿಕೋಪಕ್ಕೆ ಚಾಕು ಇರಿದು ಕೊಲೆ
ಶನಿವಾರ ಶೋಭಾ ಅವರ ವರ ಹಾಗೂ ಪತಿ ಪ್ರಕಾಶ್ ನಡುವೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಕಾಶ್ ಶೋಭಾಗೆ ಚಾಕುದಿಂದ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಗಾನಗರ (tunganagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.