Entrepreneurship | ಸ್ವಯಂ ಉದ್ಯೋಗ ಮಾಡಬಯಸುವವರಿಗೆ ಇಲ್ಲಿದೆ ತರಬೇತಿ, ಕೂಡಲೇ ಅರ್ಜಿ ಸಲ್ಲಿಸಿ

Job Training

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿ 2022-23ನೇ ಸಾಲಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಆಸಕ್ತರು ಇದರ‌ ಪ್ರಯೋಜನ ಪಡೆಯಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

READ | ಶಿವಮೊಗ್ಗದ ಇಂದಿನ ಟಾಪ್ 06 ಸುದ್ದಿಗಳು, ಜಿಲ್ಲೆಯ ವಿವಿಧ ಬೆಳವಣಿಗೆಗಳ ಮಾಹಿತಿ ಇಲ್ಲಿದೆ

ಯಾವ ತರಬೇತಿಗಳು‌ ಲಭ್ಯ?
ರೀಟೆಲ್ ಸೇಲ್ ಮತ್ತು ಆಫೀಸ್ ಅಡ್ಮೀನ್ಸಿಟ್ರೇಷನ್ ತರಬೇತಿ ಕಾರ್ಯಕ್ರಮ ಹಾಗೂ ಸೋಲಾರ್ ಪ್ಯಾನಲ್ ರಿಪೇರಿ/ ಅಳವಡಿಸುವ ತರಬೇತಿ ಕಾರ್ಯಕ್ರಮಗಳನ್ನು ಐಸಿಐಸಿಐ ಫೌಂಡೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಆಸಕ್ತ ಅರ್ಹ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗಮದ ವೆಬ್‍ಸೈಟ್ www.karnataka.gov.in/kmvstdcl ರ ಮೂಲಕ ನವೆಂಬರ್ 30ರೊಳಗಾಗಿ ಅರ್ಜಿ ಸಲ್ಲಿಸುವಂತೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-276776 ನ್ನು ಸಂಪರ್ಕಿಸುವುದು.

error: Content is protected !!