ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ವ್ಯಾಪ್ತಿಯ ಹಲವೆಡೆ ನವೆಂಬರ್ 9 ಮತ್ತು 10ರಂದು ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
READ | ಬಿಜೆಪಿಗೆ ಈ ಮೂರು ವಿಧಾನಸಭೆ ಕ್ಷೇತ್ರಗಳ ಮೇಲೆ ಕಣ್ಣು, ಈಶ್ವರಪ್ಪ ಹೇಳಿದ್ದೇನು?
ಪವರ್ ಕಟ್ 1
ನವೆಂಬರ್ 9 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ತಾಲ್ಲೂಕಿನ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-6(ಕಲ್ಲೂರು ಮಂಡ್ಲಿ), ಎಫ್-8(ರಾಮಿನಕೊಪ್ಪ) ಮತ್ತು ಎಫ್-17(ಹಾಯ್ಹೊಳೆ) ಮಾರ್ಗದ ವ್ಯಾಪ್ತಿಯಲ್ಲಿ ಹೆದ್ದಾರಿ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿ ಇರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅನುಪಿನಕಟ್ಟೆ, ಪೋದಾರ್ ಶಾಲೆ, ಪುರದಾಳು, ಅಗಸವಳ್ಳಿ, ಹಾಯ್ಹೊಳೆ, ರಾಮೇನಕೊಪ್ಪ, ಕಲ್ಲೂರು, ಹೊಸೂರು, ಬೈರಾಪುರ, ಕೌಲಾಪುರ, ಬೆಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪವರ್ ಕಟ್ 2
ನಗರ ಉಪ ವಿಭಾಗ 2ರ ಘಟಕ-5 ಮತ್ತು 6ರ ಮಂಡ್ಲಿ 100 ಅಡಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 9ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದುರ್ಗಿಗುಡಿ, ಗಾರ್ಡನ್ ಏರಿಯಾ, ನೆಹರೂ ರಸ್ತೆ, ಇಲಿಯಾಜ್ ನಗರ 1 ಮತ್ತು 14ನೇ ಕ್ರಾಸ್, ಟಿಪ್ಪುನಗರ, ಮಂಜುನಾಥ ಬಡಾವಣೆ, ಮಂಡಕ್ಕಿಭಟ್ಟಿ, ಫಾರೂಕ್ಯ ಶಾದಿಮಹಲ್, ಎಸ್.ಜೆ. ಶಾದಿಮಹಲ್, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ, ಕಲ್ಲೂರು ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ, ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಪವರ್ ಕಟ್ 3
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 10ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಐಸಿ ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯ ರಸ್ತೆ, ಮೋರ್ ಅಕ್ಕ ಪಕ್ಕ, ಗೋಪಾಳ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಕೆಹೆಚ್ಬಿ, ಎಲ್ಐಜಿ, ಎಂಐಜಿ, ಅಲ್ಹರೀಮ್ ಲೇಔಟ್, 100 ಅಡಿ ರಸ್ತೆ, ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.