ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅರ್ಹತಾ ದಿನಾಂಕ 2023ರ ಜನವರಿ 1ರಂತೆ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.
ಈ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಒಟ್ಟು 1,775 ಮತಗಟ್ಟೆಗಳಲ್ಲಿ 7,12,088 ಪುರುಷ ಹಾಗೂ 7,22,050 ಮಹಿಳೆಯರು ಸೇರಿದಂತೆ ಒಟ್ಟು 14, 34,138 ಮತದಾರರು ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ.
READ | ಶಿವಮೊಗ್ಗದಲ್ಲಿ ಆಟೋ ದರ ಏರಿಕೆ, ಏನೆಲ್ಲ ನಿಯಮಗಳು ಅನ್ವಯ, ದರ ಏರಿಕೆಗೂ ಮುನ್ನ ಆಟೋ ಚಾಲಕರು ಈ ಕೆಲಸ ಮಾಡಲೇಬೇಕು
ಮತದಾರರ ಸಂಖ್ಯಾ ವಿವರ ಪಟ್ಟಿ
- 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 247 ಮತಗಟ್ಟೆಗಳಿದ್ದು, 1,03,076 ಪುರುಷ ಹಾಗೂ 1,03,782 ಮಹಿಳಾ ಮತದಾರರು ಸೇರಿ ಒಟ್ಟು 2,06,858 ಮತದಾರರಿದ್ದಾರೆ.
- 112-ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 253 ಮತಗಟ್ಟೆಗಳಿದ್ದು, 1,00,805 ಪುರುಷ ಹಾಗೂ 1,05,936 ಮಹಿಳಾ ಮತದಾರರು ಸೇರಿ ಒಟ್ಟು 2,06,741 ಮತದಾರರಿದ್ದಾರೆ.
- 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 282 ಮತಗಟ್ಟೆಗಳಿದ್ದು, 1,24,949 ಪುರುಷ ಹಾಗೂ 1,29,519 ಮಹಿಳಾ ಮತದಾರರು ಸೇರಿ ಒಟ್ಟು 2,54,468 ಮತದಾರರಿದ್ದಾರೆ.
- 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 258 ಮತಗಟ್ಟೆಗಳಿದ್ದು, 90,454 ಪುರುಷ ಹಾಗೂ 92,324 ಮಹಿಳಾ ಮತದಾರರು ಸೇರಿ ಒಟ್ಟು 1,82,778 ಮತದಾರರಿದ್ದಾರೆ.
- 115-ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 232 ಮತಗಟ್ಟೆಗಳಿದ್ದು, 97,457 ಪುರುಷ ಹಾಗೂ 95,718 ಮಹಿಳಾ ಮತದಾರರು ಸೇರಿ ಒಟ್ಟು 1,93,175 ಮತದಾರರಿದ್ದಾರೆ.
- 116-ಸೊರಬ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 239 ಮತಗಟ್ಟೆಗಳಿದ್ದು, 96,443 ಪುರುಷ ಹಾಗೂ 94,066 ಮಹಿಳಾ ಮತದಾರರು ಸೇರಿ ಒಟ್ಟು 1,90,509 ಮತದಾರರಿದ್ದಾರೆ.
- 117-ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 264 ಮತಗಟ್ಟೆಗಳಿದ್ದು, 98,904 ಪುರುಷ ಹಾಗೂ 1,00,705 ಮಹಿಳಾ ಮತದಾರರು ಸೇರಿ ಒಟ್ಟು 1,99,609 ಮತದಾರರಿದ್ದಾರೆ.