Court news | ಗುಡ್ಡಕ್ಕೆ ಕರೆಸಿ ಮರ್ಡರ್ ಮಾಡಿದವನಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

Shivamogga Court

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಳಲಿಮಕ್ಕಿ ಗ್ರಾಮದ ವಾಸಿ ನಾಗರಾಜ್ (35) ಅವರನ್ನು ಕೆಸಿನಮನೆ ಅಭಯಾರಣ್ಯದ ಗುಡ್ಡಕ್ಕೆ ಕರೆಸಿಕೊಂಡು ತನ್ನ ಬಳಿ ಇದ್ದ ಪರವಾನಿಗೆ ಇಲ್ಲದ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಮತ್ತು ₹2 ಲಕ್ಷ ದಂಡ ವಿಧಿಸಲಾಗಿದೆ.
ತೀರ್ಥಹಳ್ಳಿಯ ವಾಟಗಾರು ಗ್ರಾಮದ ವಾಸಿ ಭುಜಂಗ ಅಲಿಯಾಸ್ ಪಾನ್ (43) ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶರಾದ ಬಿ.ಆರ್ ಪಲ್ಲವಿ ಶಿಕ್ಷೆ ವಿಧಿಸಿದ್ದಾರೆ.
2013ರ ಜೂನ್ 6ರಂದು ಕೊಲೆ ಮಾಡಿ ನಾಗರಾಜ್ ಬಳಿ‌ ಇದ್ದ ಬೈಕ್, ನಗದು ಹಣ, ಬಂಗಾರದ ಚೈನ್‌ ಮತ್ತು ಉಂಗುರವನ್ನು ತೆಗೆದುಕೊಂಡು ಹೋಗಿದ್ದ. ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು‌. ತನಿಖಾಧಿಕಾರಿ ತೀರ್ಥಹಳ್ಳಿ ಡಿವೈಎಸ್ಪಿ ಓಂಕಾರ್ ನಾಯ್ಕ್ ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು‌. ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.
ಸರ್ಕಾರಿ ಅಭಿಯೋಜಕಿ ಪುಷ್ಪ ಪ್ರಕರಣದ ವಾದ ಮಂಡಿಸಿದ್ದರು.

error: Content is protected !!