Today Gold rate | 53 ಸಾವಿರದ ಗಡಿ ದಾಟಿದ ಚಿನ್ನ! ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು?

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ನವೆಂಬರ್ ಎರಡನೇ ವಾರದ ಆರಂಭದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯು 51,100 ರೂ. ಇತ್ತು. ಆದರೆ, 10 ದಿನಗಳ ಅಂತರದಲ್ಲಿಯೇ ಬೆಲೆಯು 2,130 ರೂ. ಏರಿಕೆಯಾಗಿದೆ.
ನವೆಂಬರ್ 8ರಂದು 24 ಕ್ಯಾರಟ್ (10 ಗ್ರಾಂ) ಚಿನ್ನಕ್ಕೆ 51,100 ರೂ. ಬೆಲೆಯಿತ್ತು. ಅದು ನ.18ರ ಹೊತ್ತಿಗೆ 53,230 ರೂ.ಗೆ ತಲುಪಿದೆ.

READ | ಚಿನ್ನಾಭರಣ ಪ್ರಿಯರಿಗೆ ಶಾಕ್, ಸತತ ಮೂರು ದಿನಗಳಿಂದ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳ

ಹಳದಿ ಲೋಹದ ಬೆಲೆಯು ನಿರಂತರ ಏರಿಕೆಯಾಗುತ್ತಿದ್ದು, ಚಿನ್ನಾಭರಣ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಅಪರಂಜಿ ಮತ್ತು ಆಭರಣ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಜಿಗಿತ ಕಂಡಿದ್ದು, ಒಂದೇ ದಿನದಲ್ಲಿ 820 ರೂ.ದಷ್ಟು ಹೆಚ್ಚಳವಾಗಿದೆ. ಅದೇ ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಬಹುತೇಕ ಚಿನ್ನದ ಬೆಲೆಯು ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆಯಾಗುತ್ತಿದೆ.
ಬೆಳ್ಳಿಯ ಬೆಲೆಯಲ್ಲಿ ಇಳಿಕೆ
ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದ್ದರೆ, ಬೆಳ್ಳಿಯ ದರವು ಇಳಿಕೆಯಾಗಿದೆ. ನ.16ಕ್ಕೆ ಹೋಲಿಸಿದರೆ 17ರಂದು 1,300 ರೂ. ಹೆಚ್ಚಳವಾಗಿದೆ.

ನವೆಂಬರ್ ತಿಂಗಳಲ್ಲಿ ಚಿನ್ನದ ಬೆಲೆ (10 ಗ್ರಾಂ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನ.13 48,260 52640
ನ.14 48,290 52,670
ನ.15 47,850 52,670
ನ.16 48,050 52,410
ನ.17 48,050 52410
ನ.18 48,800 53,230
ಬೆಳ್ಳಿಯ ಬೆಲೆ (ಪ್ರತಿ ಕೆಜಿ)
ದಿನಾಂಕ 1 ಕೆಜಿ
ನ.13 67,500
ನ.14 67,700
ನ.15 68,500
ನ.16 68,500
ನ.17 68,500
ನ.18 67,200

error: Content is protected !!