ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹಾಲ್ ಲಕ್ಕವಳ್ಳಿ (Hal lakkavalli) ಗ್ರಾಮದಲ್ಲಿ ಪತ್ನಿಗೆ ಕಿರುಕುಳ ನೀಡಿ ಕೊಲೆ ಮಾಡಿದ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಮತ್ತು ₹50,000 ದಂಡ ವಿಧಿಸಿದೆ.
ಹಾಲ್ ಲಕ್ಕವಳ್ಳಿ ಗ್ರಾಮದ ನಿವಾಸಿ ಮಂಜುನಾಥ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು, ವಿನೋಬನಗರ (vinobnagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಆಗಿನ ದೊಡ್ಡಪೇಟೆ (doddapete) ಠಾಣೆ ಪಿಐ ವಸಂತ್ ಕುಮಾರ್ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (charge sheet) ಸಲ್ಲಿಸಿದ್ದರು.
READ | ಓಟರ್ ಐಡಿ ವರ್ಗಾವಣೆ, ಹೆಸರು ಸೇರ್ಪಡೆ, ಬದಲಾವಣೆ, ಹೊಸಬರ ಹೆಸರು ಸೇರ್ಪಡೆಗೇನು ಮಾಡಬೇಕು?
ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನು ಅವರು ವಿಚಾರ ಕೈಗೊಂಡಿದ್ದು, ಆರೋಪಿ ಮಂಜುನಾಥ ಅಲಿಯಾಸ್ ಮಂಜ(36) ಈತನ ವಿರುದ್ಧ ಐಪಿಸಿ ಕಲಂ 302 ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ₹50,000 ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಮಮತ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.