ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIVAMOGGA: ಮಹಿಳೆಯೊಬ್ಬರಿಗೆ ಆಪ್(ತಂತ್ರಾಂಶ) ವೊಂದರಲ್ಲಿ ಪರಿಚಯವಾದ ವ್ಯಕ್ತಿ ವಾಟ್ಸಾಪ್’ನಲ್ಲಿ ಅಶ್ಲೀಲ ವಿಡಿಯೋ ಮತ್ತು ಫೋಟೊಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಬೈಸಾ ಪೂರ್ಣಿಯ ಜಿಲ್ಲೆಯ ಚಕ್ಲ ಗ್ರಾಮದ ರೋಜರ್ ರಜಾ(22) ಎಂಬಾತನನ್ನು ಬಂಧಿಸಲಾಗಿದೆ.
1 ಲಕ್ಷಕ್ಕಾಗಿ ಡಿಮ್ಯಾಂಡ್
ಆಪ್(ತಂತ್ರಾಂಶ)ವೊಂದರಲ್ಲಿ ರೋಜರ್ ರಜಾ ಹೆಸರಿನ ಪರಿಚಯವಾಗಿದ್ದು, ನಂತರ ಇಬ್ಬರೂ ವಾಟ್ಸಾಪ್ ಮುಖಾಂತರ ವಿಡಿಯೋ ಮತ್ತು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ನಂತರ ಆಕೆಗೆ ಬೆದರಿಕೆ ಹಾಕಿ ಆಕೆಯ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು 1 ಲಕ್ಷ ರೂಪಾಯಿ ನೀಡು, ಇಲ್ಲವಾದರೆ ಈ ಫೋಟೋ ಮತ್ತು ವಿಡಿಯೋಗಳನ್ನು ನಿಮ್ಮ ಮನೆಯವರಿಗೆ ಕಳಿಸುತ್ತೇನೆ ಎಂದು ಹೆದರಿಸಿ ಮಾನಸಿಕ ಹಿಂಸೆ ನೀಡಿದ್ದಾನೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಭೇಷ್
ಪ್ರಕರಣದ ತನಿಖೆ ಕೈಗೊಂಡ ಶಿಕಾರಿಪುರ ಟೌನ್ ವೃತ್ತದ ಸಿಪಿಐ, ಶಿರಾಳಕೊಪ್ಪ ಪೊಲೀಸ್ ಠಾಣೆ ಪಿ.ಎಸ್.ಐ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ನ.24ರಂದು ಆರೋಪಿಯನ್ನು ಬಂಧಿಸಿ, ಭಾನುವಾರ ಠಾಣೆಗೆ ಕರೆತರಲಾಗಿದೆ.
ಕೃತ್ಯಕ್ಕೆ ಬಳಸಿದ ಮೊಬೈಲ್ ಸೀಜ್
ವಿಚಾರಣೆಗೊಳಪಡಿಸಿ ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸಿಸಿದ್ದಾರೆ.
TOP 10 News | ಶಿವಮೊಗ್ಗದ ಇಂದಿನ ಬಿಸಿ ಬಿಸಿ ಸುದ್ದಿಗಳೇನು? ಕ್ಲಿಕ್ ಮಾಡಿ ಓದಿ