Ashraya House | ಶಿವಮೊಗ್ಗ ನಗರದಲ್ಲಿ ವಾಸವಿಲ್ಲದ ಆಶ್ರಯ ಮನೆಗಳು ರದ್ದು, ಎಲ್ಲಿ, ಎಷ್ಟು ಮನೆ ರದ್ದು?

Ashraya mane

 

 

ಸುದ್ದಿ ಕಣಜ.ಕಾಂ | DISTRICT | 01 NOV 2022
ಶಿವಮೊಗ್ಗ (Shivamogga): ನಗರ ಆಶ್ರಯ ಗುಂಪು ಮನೆ ಯೋಜನೆಯಡಿ ಸರ್ವೇ ನಂ.56 ಎಚ್ ಬ್ಲಾಕ್‍ನಲ್ಲಿ 221 ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗಿದ್ದು, ನಿವೇಶನಗಳನ್ನು ಪಡೆದು ವಾಸವಿಲ್ಲದೇ ಇರುವ ನಿವೇಶನದಾರರ ಮನೆಗಳನ್ನು ರದ್ದುಪಡಿಸಲಾಗಿದೆ.
ಷರತ್ತುಗಳ‌ ಉಲ್ಲಂಘನೆ ಹಿನ್ನೆಲೆ ಕ್ರಮ
ನಿವೇಶನ ಪಡೆದು ವಾಸವಿಲ್ಲದೇ ಖಾಲಿ ಇರುವುದರಿಂದ ನಿವೇಶನದಾರರು ಸರ್ಕಾರದ ಆದೇಶದ ಹಕ್ಕುಪತ್ರದ ಹಿಂದೆ ಇರುವ ಷರತ್ತನ್ನು ಉಲ್ಲಂಘಿಸಿದ್ದು ಹಾಗೂ ತಮಗೆ ಮಂಜೂರಾಗಿರುವ ನಿವೇಶನಗಳಲ್ಲಿ ವಾಸವಿಲ್ಲದೇ ಖಾಲಿ ಇರುವುದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂಬುವುದು ಕಂಡುಬಂದಿರುತ್ತದೆ. ಆದ್ದರಿಂದ ನಿವೇಶನದಾರರಿಗೆ ಮನೆಯ ಅವಶ್ಯಕತೆ ಇಲ್ಲವೆಂದು ಪರಿಗಣಿಸಿ, 6 ತಿಂಗಳ ಮುಂಚಿತವಾಗಿ (20-04-2022) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ, ಆಕ್ಷೇಪಣೆಗೆ ಬಂದ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದು, ಉಳಿದ ಮನೆಗಳನ್ನು ರದ್ದುಪಡಿಸಲಾಗಿರುತ್ತದೆ ಎಂದು ಮಹಾನಗರಪಾಲಿಕೆ ಸಮುದಾಯ ಸಂಘಟನಾಧಿಕಾರಿಗಳು ತಿಳಿಸಿದ್ದಾರೆ.

https://suddikanaja.com/2022/10/31/rm-manjunath-gowda-demand-to-control-arecanut-leaf-spot-disease-at-malenadu/

Leave a Reply

Your email address will not be published. Required fields are marked *

error: Content is protected !!