
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನವೆಂಬರ್ 25ರಂದು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
READ | ಆಟೋ ಚಾಲಕನಿಗೆ ₹15 ಸಾವಿರ ದಂಡ, ಕಟ್ಟಲು ನಿರಾಕರಿಸಿದ್ದಕ್ಕೆ 10 ದಿನ ಜೈಲು ಶಿಕ್ಷೆ
ಸರ್ಕಾರದ ಸುತ್ತೋಲೆ ಮತ್ತು ಪೌರಾಡಳಿತ ನಿರ್ದೇಶನಾಲಯದ ಪತ್ರದನ್ವಯ ಅಂದು ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮ ದಿನವಿದ್ದು, ಈ ಹಿನ್ನೆಲೆಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಅಂದು ಕಡ್ಡಾಯವಾಗಿ ಮಾಂಸದ ಉದ್ದಿಮೆಯನ್ನು ಮುಚ್ಚುವುದು ಹಾಗೂ ಮಾಂಸ ಮಾರಾಟ ನಿಲ್ಲಿಸುವುದು. ಈ ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.