
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
READ | ಗುಡ್ಡಕ್ಕೆ ಕರೆಸಿ ಮರ್ಡರ್ ಮಾಡಿದವನಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್
ಯಾವಾಗ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
- ನವೆಂಬರ್ 16 ರಂದು ನಗರ ಉಪ ವಿಭಾಗ-2 ರ ಘಟಕ-5 ರ ವ್ಯಾಪ್ತಿಯಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿಯ ಕೆಲಸ ಹಾಗೂ ಎಂ.ಎಫ್-12 ಆರ್ಎಂಎಲ್ ನಗರ 11 ಕೆವಿ ಮಾರ್ಗದ ನಿರ್ವಹಣೆ ಇರುವ ಕಾರಣ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆರ್ಎಂಎಲ್ ನಗರ 1ನೇ ಮತ್ತು 2ನೇ ಹಂತ, ಟಿಪ್ಪುನಗರ, ಮಂಜುನಾಥ ಬಡಾವಣೆ, ಆನಂದ ರಾವ್ ಬಡಾವಣೆ, ಮಿಳಘಟ್ಟ, ಬುದ್ದನಗರ, ಡಿಪೋ ರಸ್ತೆ, ಮಾರ್ನಮಿ ಬೈಲು, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. - ನವೆಂಬರ್ 17 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಕೆಎಸ್ಆರ್ಟಿಸಿ ಲೇಔಟ್, ರೇಣುಕಾಂಬಾ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೆಕ್ಸ್, ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ಕರಿಯಣ್ಣ ಬಿಲ್ಡಿಂಗ್, ಕಲ್ಲಹಳ್ಳಿ ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್ ಬ್ಲಾಕ್, ಎಸ್.ಕೆ.ಎನ್ ಶಾಲೆ, ಪೊಲೀಸ್ ಚೌಕಿ, ಹುಚ್ಚರಾಯ ಕಾಲೋನಿ, ಚೇತನಾ ಪಾರ್ಕ್, ಲಕ್ಷ್ಮೀಪುರ, ಪ್ರಿಯದರ್ಶಿನಿ ಲೇಔಟ್, ತಿಮ್ಮಕ್ಕ ಲೇಔಟ್, ಪೊಲೀಸ್ ಚೌಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. - ನವೆಂಬರ್ 18 ರಂದು ಶಿವಮೊಗ್ಗ ತಾಲ್ಲೂಕು ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಎಫ್-2, ಎಫ್-3, ಎಫ್-4, ಎಫ್-5 ಮತ್ತು ಎಫ್-6 ಸಕ್ರೆಬೈಲು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ ಕಡೆಕಲ್, ಯರಗನಾಳ್, ಕುಸ್ಕೂರು, ಸಿದ್ದರಹಳ್ಳಿ, ಮಂಡೇನಕೊಪ್ಪ, ಶ್ರೀಕಂಠಪುರ, ವೀರಾಪುರ, ತಟ್ಟೆಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.