ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನವೆಂಬರ್ 11ರಿಂದ 15ರ ವರೆಗೆ ನಡೆಯುವ 37ನೇ ನ್ಯಾಷನಲ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು ಶಿವಮೊಗ್ಗ ಜಿಲ್ಲಾ ವಸತಿ ನಿಲಯದ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
READ | ಶಿವಮೊಗ್ಗದಲ್ಲಿ ನಡೆಯಲಿದೆ ಉದ್ಯೋಗ ಮೇಳ, ಯಾರೆಲ್ಲ ಪಾಲ್ಗೊಳ್ಳಬಹುದು?
ಯಾರೆಲ್ಲ ಆಯ್ಕೆ?
ಗೌರಾಂಗಿ ಗೌಡ ಎತ್ತರ ಜಿಗಿತ, ಗೌತಮಿ ಗೌಡ 80 ಮೀ ಹರ್ಡಲ್ಸ್, ನಿತಿನ್ ಸಿಂಗ್ ಲಾಂಗ್ ಜಂಪ್, ಆಕಾಶ್ ಎಸ್ ಗೊಲ್ಲರ್ 800 ಮೀ, 400 ಮೀ. ಗೆ ಆಯ್ಕೆಯಾಗಿದ್ದು ಈ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ ತರಬೇತುದಾರ ಬಾಳಪ್ಪ ಮಾನೆ ದೈನಂದಿನ ತರಬೇತಿ ನೀಡುತ್ತಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ ಮತ್ತು ಸಿಬ್ಬಂದಿ ವರ್ಗದವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.