ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 111-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ-2023 ರ ಸಂಕ್ಷಿಪ್ತ ಪರಿಷ್ಕರಣೆಯು ಪ್ರಾರಂಭವಾಗಲಿದ್ದು, ನವೆಂಬರ್ 12, 20, ಡಿಸೆಂಬರ್ 3 ಹಾಗೂ 4 ರಂದು ಶಿವಮೊಗ್ಗ ನಗರದ ಎಲ್ಲ ಮತಗಟ್ಟೆಗಳ ಮತಗಟ್ಟೆ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಹಾಜರಿದ್ದು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಅಂದರೆ ದಿನಕ 01-01-2023 ಕ್ಕೆ 18 ವರ್ಷ ತುಂಬುವ ಯುವ ಮತದಾರರಿಂದ ನಮೂನೆ-6 ರಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಾರೆ.
READ | ಉದ್ಯೋಗ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಎಲ್ಲ ಉದ್ಯೋಗಗಳ ಒಂದೇ ಪೋರ್ಟಲ್, ಒಂದು ವೇದಿಕೆಯಲ್ಲಿ ನೂರಾರು ಕಂಪೆನಿ
ಯಾವ ನಮೂನೆಯಿಂದ ಏನು ಪ್ರಯೋಜನ?
- ನಮೂನೆ-7 ರಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಹಾಗೂ ನಮೂನೆ-8 ರಲ್ಲಿ ಮತದಾರರ ಗುರುತಿನ ಚೀಟಿಗಳಲ್ಲಿನ ದೋಷಗಳನ್ನು ಸರಿಪಡಿಸುವುದು ಹಾಗೂ ಒಂದು ಮತದಾರರ ಕ್ಷೇತ್ರದಿಂದ ಮತ್ತೊಂದು ಮತದಾರ ಕ್ಷೇತ್ರಕ್ಕೆ ವರ್ಗಾವಣೆ ಮಾಡಲು ಹಾಗೂ ವಿಕಲಚೇತನ ಅಂಗವಿಕಲತೆಯ ಪ್ರಮಾಣವನ್ನು ನಮೂದಿಸಲು ಅವಕಾಶವಿರುತ್ತದೆ.
- ಮತಗಟ್ಟೆ ಅಧಿಕಾರಿಗಳು ದಿನಾಂಕ 09-11-2022 ರಿಂದ 08-12-2022 ರವರೆಗೆ ತಮ್ಮ ವ್ಯಾಪ್ತಿಯ ಮನೆಗಳಿಗೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡುವರು.
- ಕುಟುಂಬದ ಸದಸ್ಯರಲ್ಲಿನ ಯುವ ಮತದಾರರನ್ನು ಸೇರ್ಪಡೆಗೊಳಿಸಲು, ಮೃತಪಟ್ಟವರಿದ್ದಲ್ಲಿ, ವಾಸವಿಲ್ಲದವರಿದ್ದಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಹಾಗೂ ಅವರು ಹೊಂದಿರುವ ಗುರುತಿನ ಚೀಟಿಯಲ್ಲಿ ಯಾವುದಾದರೂ ಬದಲಾವಣೆ(ಹೆಸರು, ಸಂಬಂಧಿಯ ಹೆಸರು, ಜನನ ದಿನಾಂಕ ಹಾಗೂ ವಿಳಾಸ ಅಥವಾ ಲಿಂಗ ಬದಲಾವಣೆ) ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವನ್ನು ಭಾರತ ಚುನಾವಣಾ ಆಯೋಗವು ನೀಡಿರುತ್ತದೆ.
- ಮತದಾರರು ತಮ್ಮ ಕುಟುಂಬದಲ್ಲಿ ಮೃತಪಟ್ಟವರು, ಬೇರೆ ಕಡೆ ಸ್ಥಳಾಂತರಗೊಂಡವರು ಇದ್ದಲ್ಲಿ ಅವರ ಹೆಸರುಗಳನ್ನು ನಮೂನೆ-7 ರ ಮೂಲಕ ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು.
ಓಟರ್ ಐಡಿ ಜತೆ ಲಿಂಕ್
ಇದೇ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಮತದಾರರು ಹೊಂದಿರುವ ಗುರುತಿನ ಚೀಟಿ(ಐಡಿ ಕಾರ್ಡ್) ಆಧಾರ್ ನಂಬರ್ ಅಥವಾ ಇನ್ನಿತರೇ ದಾಖಲಾತಿಗಳಾದ ಪಾನ್ಕಾರ್ಡ್, ವಾಹನ ಚಾಲನಾ ಪರವಾನಗಿ, ಪಾಸ್ಪೋರ್ಟ್ ದಾಖಲಾತಿಗಳನ್ನು ನೀಡಿ ಸದರಿ ದಾಖಲಾತಿಗಳಿಗೆ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬಹುದಾಗಿರುತ್ತದೆ. ಅಥವಾ ಮತದಾರರೇ ತಮ್ಮ ಮೊಬೈಲ್ನಲ್ಲಿ VOTER HELPLINE (VHL) ನಲ್ಲಿ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.
https://suddikanaja.com/2022/11/06/54-4g-tower-section-to-shivamogga-mp-constituancy/