ಸುದ್ದಿ ಕಣಜ.ಕಾಂ ಶಿವಮೊಗ್ಗ(Shivamogga)
ನಗರದ ರೈಲ್ವೆ ಫ್ಲಾಟ್ ಫಾರಂನಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದ ಸುಮಾರು 35 ವರ್ಷದ ಅಂಜನಮ್ಮ ಎಂಬ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆ(meggan hospital)ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 27 ರಂದು ಮೃತಪಟ್ಟಿರುತ್ತಾಳೆ.
ಅಂಜನಮ್ಮ ಕ್ಯಾನ್ಸರ್ (cancer) ಕಾಯಿಲೆಯಿಂದ ಮೃತಪಟ್ಟಿದ್ದು, ಈಕೆಯ ವಾರಸುದಾರರು ಇಲ್ಲದ ಕಾರಣ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
READ | ಭಾರತ್ ಜೋಡೊದಿಂದ ಕಾಂಗ್ರೆಸ್ಗೆ ಯಾವ ಪ್ರಯೋಜನವಿಲ್ಲ
ಮಹಿಳೆಯ ಬಗ್ಗೆ ಮಾಹಿತಿ
ಮೃತಳು ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮಾಸಲು ಬಣ್ಣದ ಸೀರೆ ಹಾಗೂ ಕಂದು ಬಣ್ಣದ ಬ್ಲೌಸ್ ಧರಿಸಿರುತ್ತಾಳೆ. ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಸಂಖ್ಯೆ 08182- 261400, ಜಿಲ್ಲಾ ಕಂಟ್ರೋಲ್ ರೂಂ 08182- 261413, ಜಯನಗರ ಪೊಲೀಸ್ ಠಾಣೆ (Jayanagar police station) ಸಂಖ್ಯೆ 08182- 261416 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.