Stray dog attack | ಬಾಲಕನ ಬಲಿ ಪಡೆದ ಬೀದಿನಾಯಿಗಳ ಗುಂಪು

dog killed stray dogs

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ದೊಣಬಘಟ್ಟ (Donabaghatta) ಗ್ರಾಮದಲ್ಲಿ ಬೀದಿನಾಯಿಗಳ ಗುಂಪೊಂದು ಬಾಲಕನ ಮೇಲೆ ಎರಗಿ ಬಲಿ ಪಡೆದ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಸೈಯದ್ ನಸುರುಲ್ಲಾ ಅವರ ಪುತ್ರ ಸೈಯದ್ ಮದನಿ(4) ಮೃತ ಬಾಲಕ. ಈತನ ಮೇಲೆ ಏಳೆಂಟು ಬೀದಿನಾಯಿ(Stray dog)ಗಳು ಎರಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದರೂ ನಾಯಿಗಳ ಗುಂಪು ಕಚ್ಚಿವೆ. ಪರಿಣಾಮ ಬಾಲಕ ತೀವ್ರ ಗಾಯಗೊಂಡಿದ್ದಾನೆ.

READ | ಪೊಲೀಸರ ದಿಢೀರ್ ಕಾರ್ಯಾಚರಣೆ, 10 ಜನರ ವಶ

ಟ್ರ್ಯಾಕ್ಟರ್’ನಲ್ಲಿ ಸಾಗುವಾಗ ಬೀದಿನಾಯಿಗಳು ಅಟ್ಯಾಕ್
ಬಾಲಕನ ತಂದೆ ಸೈಯದ್ ನಸುರುಲ್ಲಾ ಅವರು ಭತ್ತದ ಕಟಾವು ಮಾಡುವುದಕ್ಕಾಗಿ ಟ್ರ್ಯಾಕ್ಟರ್’ನಲ್ಲಿ ಕುಳಿತುಕೊಂಡು ಹೋಗುವಾಗ ಬಾಲಕನು ಹಿಂದೆ ಓಡಿಬಂದಿದ್ದಾನೆ. ಆಗ ನಾಯಿಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ.
ಮಗನ ಮೇಲೆ ನಾಯಿಗಳು ಎರಗಿದರೂ ಟ್ರ್ಯಾಕ್ಟರ್ ಸದ್ದಿನಿಂದಾಗಿ ಮಗುವಿನ ಶಬ್ದ ಕೇಳಿಸಿಲ್ಲ ಎನ್ನಲಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ.

https://suddikanaja.com/2022/11/30/mp-by-raghavendra-furious-reaction-on-congress-allegations-and-asked-questions/

error: Content is protected !!