ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹರಮಘಟ್ಟ (Haramaghatta) ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ದನಗಳನ್ನು ಬಲಿಪಡೆದ ಚಿರತೆ (leopard)ಬೋನಿಗೆ ಬಿದ್ದಿದೆ.
READ | ತಾಂತ್ರಿಕ ಕಾರಣದಿಂದ ಮೆಸ್ಕಾಂನಲ್ಲಿ ಬಳಕೆಯಾಗದ ಅನುದಾನ, ಇಲಾಖೆಗಳಿಗೆ ಡಿಸಿ ಖಡಕ್ ವಾರ್ನಿಂಗ್
ಸೆರೆಗೆ ಬಿದ್ದಿರುವ ಗಂಡು ಚಿರತೆಯು ದೈಹಿಕವಾಗಿ ದಷ್ಟಪುಷ್ಟವಾಗಿದ್ದು, ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಇದನ್ನು ಸೆರೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆಯವರು ಸಾಕಷ್ಟು ಪ್ರಯತ್ನಿಸಿದ್ದರು. ಹರಮಘಟ್ಟ ಗ್ರಾಮದ 200 ಮೀಟರ್ ವ್ಯಾಪ್ತಿಯಲ್ಲಿ ಬೋನಿಟ್ಟು ಅದರಲ್ಲಿ ನಾಯಿಯನ್ನು ಇಡಲಾಗಿತ್ತು. ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಚಿರತೆ ನೋಡಲು ಬಂದ ಜನ, ಅಧಿಕಾರಿಗಳು
ಚಿರತೆ ಬೋನಿಗೆ ಬಿದ್ದ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಕ್ಕಪಕ್ಕದ ಜನರು ಸ್ಥಳಕ್ಕೆ ದೌಡಾಯಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದರು.
https://suddikanaja.com/2022/12/01/stray-dog-attack-on-a-girl-at-purle-shimoga/