Shivamogga railway | ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕ, ಪ್ರಾಣದ ಹಂಗು ತೊರೆದು ರಕ್ಷಣೆ

shivamogga railway

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ನಡೆದಿದೆ.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ (VIDEO REPORT)

ರೈಲ್ವೆ ಪೊಲೀಸ್ ಕಾನ್ಸ್’ಟೆಬಲ್ ಮಂಜುನಾಥ್ ಎಂಬುವವರು ಪ್ರಯಾಣಿಕ ರಕ್ಷಣೆ ಮಾಡಿದ್ದಾರೆ. ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ಆತನನ್ನು ತಕ್ಷಣ ರಕ್ಷಿಸಲಾಗಿದೆ. ಈ ಮೈಜುಮ್ಮೆನಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಲಿಸುತ್ತಿದ್ದ ರೈಲು ಹತ್ತುವಾಗ ಘಟನೆ
ಡಿ.10ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿದ್ದ ರೈಲು ಸಂಖ್ಯೆ 16221 ತಾಳಗುಪ್ಪ- ಮೈಸೂರು ರೈಲನ್ನು ಹತ್ತುವಾಗ ಕಾಲು ಜಾರಿ ಹಳಿಗೆ ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಸಿಬ್ಬಂದಿಯು ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ರೈಲನ್ನು ನಿಲ್ಲಿಸಿ ಅವರನ್ನು ಹಳಿಯಿಂದ ಮೇಲೆತ್ತುವಲ್ಲಿ ಸಫಲರಾಗಿದ್ದಾರೆ. ಅದೃಷ್ಟವಶಾತ್ ಜೀವಕ್ಕೆ ಹಾನಿಯಾಗಿಲ್ಲ.
ಸಂಚರಿಸುವ ರೈಲನ್ನು ಹತ್ತುವ ಅಥವಾ ಇಳಿಯಬಾರದು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

https://suddikanaja.com/2022/12/04/transfer-of-camp-elephants-from-karnataka-to-madhya-pradesh-forest-from-karnataka/

error: Content is protected !!