ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಬರ್ಟ್ (robert )ಚಿತ್ರದಲ್ಲಿ ದರ್ಶನ ಅವರೊಂದಿಗೆ ನಟಿಸಿ ಮನೆಯ ಮಾತಾಗಿರುವ ಆಶಾ ಭಟ್ (asha bhat) ಅವರು ನಗರದ ಡಿವಿಎಸ್ ಪಿಯು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸೇರಿ ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡರು.
ವಿಜ್ಞಾನ ಪ್ರಯೋಗಾಲಯದಲ್ಲಿ ತಾನೂ ಸಹ ಇಂತಹ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದೆ. ಅದೊಂದು ಅವಿಸ್ಮರಣೀಯ ಕಾಲಘಟ್ಟ ಎಂದರು.
ವಸ್ತು ಪ್ರದರ್ಶನ ವೀಕ್ಷಿಸುವುದಕ್ಕೆ ಆಗಮಿಸಿದ್ದ ಆಶಾ ಭಟ್ ಸರಳತೆ ಮೆರೆದರು. ವಿದ್ಯಾರ್ಥಿಗಳಿಂದ ಮಾಡಲ್’ಗಳ ಬಗ್ಗೆ ಮಾಹಿತಿ ಪಡೆದರು.
READ | ರಾಜ್ಯ ಸರ್ಕಾರದಿಂದ ಕವಿಮನೆಗೆ 1 ಕೋಟಿ ರೂ. ಅನುದಾನ, ಕಾರಣವೇನು?
ವೇದಿಕೆ ಸದುಪಯೋಗಪಡಿಸಿಕೊಳ್ಳಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಅದರೊಂದಿಗೆ ತಮ್ಮಲ್ಲಿನ ಪ್ರತಿಭೆಯನ್ನು ಹೊರಹಾಕಬೇಕು. ಕಾಲೇಜು ಹಂತದಲ್ಲಿ ಲಭ್ಯವಾಗುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿ ಚಿಕ್ಕ ಪಟ್ಟಣದವಳೆಂದು ಉಪೇಕ್ಷೆ ಮಾಡಿದ್ದರು
ಸ್ಟಾರ್ ಬದುಕಿನ ಆರಂಭಕ್ಕೂ ಮುನ್ನ ಮುಂಬೈನಲ್ಲಿದ್ದಾಗ ನಾನು ಚಿಕ್ಕ ಪಟ್ಟಣದವಳೆಂದು ಉಪೇಕ್ಷಿಸುತ್ತಿದ್ದರು. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುನ್ನಡೆದೆ. ಅದರ ಫಲವಾಗಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಯಿತು. ಈಗ ಅವಕಾಶಗಳಿಗೇನೂ ಕೊರತೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿ (ಡಿವಿಎಸ್) ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಬಿ.ಗೋಪಿನಾಥ್, ಆರ್.ನಿತಿನ್, ಡಿವಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಎ.ಈ.ರಾಜಶೇಖರ್ ಉಪಸ್ಥಿತರಿದ್ದರು.
https://suddikanaja.com/2022/12/27/dcc-bank-providing-yeshasvini-health-insurance-scheme-bank-president-channaveerappa-requested-to-utilize-it/