Police raid | ಭದ್ರಾವತಿಯ ಅಡಿಕೆ ತೋಟದ ಮೇಲೆ ಪೊಲೀಸರ ದಿಢೀರ್ ದಾಳಿ

bhadravathi pds rice

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ಮಜ್ಜಿಗೆನಹಳ್ಳಿ (Majjigenahalli) ಗ್ರಾಮದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ(Rice)ಯನ್ನು ಕ್ಯಾಂಟರಿಗೆ ಲೋಡ್ ಮಾಡುವಾಗ ಪೊಲೀಸರು ದಿಢೀರ್ ದಾಳಿ ನಡೆಸಿ, 1.76 ಲಕ್ಷ ಮೌಲ್ಯದ 80 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

READ | ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕ, ಪ್ರಾಣದ ಹಂಗು ತೊರೆದು ರಕ್ಷಣೆ

ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿದ್ದ ಆರೋಪಿ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದ ಮೊಹಮ್ಮದ್ ಸಮೀರ್(38), ವಾಹನದ ಚಾಲಕ ಊರುಗಡೂರಿನ ಪರ್ವೇಜ್ ಪಾಷಾ(42) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
160 ಚೀಲಗಳು ಸೀಜ್
ಮೊಹಮ್ಮದ್ ಸಮೀರ್ ಎಂಬ ವ್ಯಕ್ತಿಯು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು, ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕರು, ಪಿಎಸ್.ಐ ಮತ್ತು ಸಿಬ್ಬಂದಿ ನೇತೃತ್ವದ ತಂಡವು ಭದ್ರಾವತಿಯ ಆಹಾರ ನಿರೀಕ್ಷPರೊಂದಿಗೆ ದಾಳಿ ನಡೆಸಿದ್ದಾರೆ.
ಒಟ್ಟು 160 ಚೀಲಗಳಲ್ಲಿ ತುಂಬಿದ್ದ ಅಂದಾಜು 1.76 ಲಕ್ಷ ರೂ. ಮೌಲ್ಯದ 80 ಕ್ವಿಂಟಲ್ ಪಡಿತರ ಅಕ್ಕಿಯನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಕ್ಯಾಂಟರ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

https://suddikanaja.com/2022/12/11/four-accused-arrest-at-shivamogga-private-bus-stand/

error: Content is protected !!