ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೇರೆಯ ದೇಶಗಳಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲೂ ಕೆಲವೊಂದು ನಿಯಮಗಳು ಅನ್ವಯವಾಗಲಿವೆ.
ಆನ್ ಲೈನ್’ನಲ್ಲಿ ನಡರದ ಸಭೆಯಲ್ಲಿ ಮಾತನಾಡಿದ ಡಿಎಚ್ಒ ರಾಜೇಶ್ ಸುರಗಿಹಳ್ಳಿ, ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಜಾಸ್ತಿ ಮಾಡಲು ಸೂಚಿಸಿದರು. ಜೊತೆಗೆ ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್ ಪದ್ಧತಿ ಅಳವಡಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಶೀತ, ಜ್ವರ ಬಂದಂತವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
READ | ಶಿವಮೊಗ್ಗದಲ್ಲಿ ಮಹಿಳಾ ಕ್ರಿಕೆಟ್ ಹವಾ, ಹೇಗಿರಲಿದೆ ಪಂದ್ಯಾವಳಿ? ಯಾವೆಲ್ಲ ತಂಡಗಳು ಭಾಗಿ?
ಲಸಿಕೆ ಪಡೆಯುವಂತೆ ಸೂಚನೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರ್ವಾಹಕ ಎನ್.ಡಿ. ಪ್ರಕಾಶ್ ಮಾತನಾಡಿ, ಎಲ್ಲ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಸರಬರಾಜು, ಐಸಿಯು ಬೆಡ್ ಕಾಯ್ದಿರಿಸುವ ಬಗ್ಗೆ ಹಾಗೂ ಕೋವಿಡ್ ಲಸಿಕೆ ಮುಂಜಾಗೃತ ಡೋಸ್ ಶೇ.100ರಷ್ಟು ನೀಡಲು ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಮೊದಲನೇ ಹಾಗೂ ಎರಡನೇ ಡೋಸ್ ಶೇ.100 ರಷ್ಟು ಗುರಿಯನ್ನು ಸಾಧಿಸಿದ್ದು, ಬೂಸ್ಟರ್ ಡೋಸ್ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ 36,000 ಡೋಸ್ ದಾಸ್ತಾನಿದ್ದು ಅರ್ಹ ಫಲಾನುಭವಿಗಳು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬಂದು ಲಸಿಕೆ ಪಡೆದುಕೊಳ್ಳಿ.
ಡಾ.ನಾಗರಾಜ್ ನಾಯ್ಕ್, ಆರ್ ಸಿಎಚ್ಒ
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ 1 ಮತ್ತು ಡಿಎಸ್ಒ ಡಾ.ಮಲ್ಲಪ್ಪ, ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ನಾಗಲೀಕರ್, ಎಲ್ಲ ತಾಲ್ಲೂಕಿನ ತಹಸೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಗಳು, ಬಿಇಒಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಪಿಎಚ್ ಸಿ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
https://suddikanaja.com/2022/12/24/karnataka-state-government-employee-association-president-cs-shadakshari-statement-on-protest-against-nps/