ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಬಿಇಓ ಕಚೇರಿ ಬಳಿ ಸುಮಾರು 52 ವಯಸ್ಸಿನ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
READ | ಶಿರಾಳಕೊಪ್ಪ ಗೋಡೆಬರಹ ಪ್ರಕರಣ, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್
ವೃತ ವ್ಯಕ್ತಿಯು ಜೋಸೆಫ್ ನಗರ, ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ ಅಕ್ಕ ಪಕ್ಕದ ಕೇರಿಗಳಲ್ಲಿ ಭಿಕ್ಷೆ ಬೇಡಿಕೊಂಡಿದ್ದು, ಈತನ ಹೆಸರು, ವಿಳಾಸ ತಿಳಿದಿರುವುದಿಲ್ಲ. ಮೃತನು 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಎದೆ ಮಧ್ಯಭಾಗದಲ್ಲಿ ಕಪ್ಪು ಮಚ್ಚೆ, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಇದ್ದು, ನೀಲಿ ಬಣ್ಣದ ಟೀಶರ್ಟ್, ಕಾಫಿ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
Police release video | ಶಿರಾಳಕೊಪ್ಪ ಗೋಡೆಬರಹ ಪ್ರಕರಣ, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್