Punith Rajkumar | ಶಿವಮೊಗ್ಗದ ಈ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರಿಡುವಂತೆ ಪಾಲಿಕೆಗೆ ಮನವಿ

Punith rajkumar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಸಮನೆ ಒಂದನೇ ಮುಖ್ಯ ರಸ್ತೆಗೆ ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ್ ರಸ್ತೆ (Punith Rajkumar Road) ಎಂದು ನಾಮಕರಣ ಮಾಡುವಂತೆ ಕೋರಿ ಮಹಾನಗರ ಪಾಲಿಕೆ ಮೇಯರ್ (Mayor) ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಿದ ನಟ, ಮೇರು ವ್ಯಕ್ತಿತ್ವದ ಪುನೀತ್ ಅವರ ಹೆಸರನ್ನು ನಗರದ 20ನೇ ವಾರ್ಡ್ ಹೊಸಮನೆ (Hosamane) ಬಡಾವಣೆಯ 1ನೇ ಮುಖ್ಯ ರಸ್ತೆಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

READ | ಸಕ್ರೆಬೈಲಿಗೆ ಹೊಸ ಅತಿಥಿಯ ಆಗಮನ, ಕುಂತಿಗೆ 4ನೇ ಮರಿಯ ಖುಷಿ, ನಾಮಕರಣ ಹುಟ್ಟಿಸಿದ ಕೌತುಕ

ಸಭೆಯಲ್ಲಿ ಕೈಗೊಂಡ ತೀರ್ಮಾನ
ಪುನಿತ್ ಅಭಿಮಾನಿಗಳು ಹಾಗೂ ಬಡಾವಣೆ ನಾಗರಿಕರು ಒಕ್ಕೊರಳಿನಿಂದ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಅವರೊಂದಿಗೆ ಸಭೆ ಸೇರಿ ತೀರ್ಮಾನಿಸಿದ್ದು, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದಿಸಬೇಕು. ಅಧಿಕೃತವಾಗಿ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಎಂಬ ನಾಮಕರಣಕ್ಕೆ ಒಪ್ಪಿಗೆ ನೀಡಬೇಕೆಂದು ಕೋರಿದ್ದಾರೆ.
ಈ ವೇಳೆ ಹೊಸಮನೆ ಬಡಾವಣೆ ಪಾಲಿಕೆ ಸದಸ್ಯೆ ಹಾಗೂ ವಿಪಕ್ಷ ಪಕ್ಷದ ನಾಯಕಿ ರೇಖಾ ರಂಗನಾಥ್(Rekha Ranganath), ಹೊಸಮನೆ ನಾಗರಿಕ ಸಮಿತಿ ಅಧ್ಯಕ್ಷ ಆರ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಪದಾಧಿಕಾರಿಗಳಾದ ಸುರೇಶ್, ಮಾರುತಿ, ಭಗತ್ ಉಪಸ್ಥಿತರಿದ್ದರು.

https://suddikanaja.com/2022/12/15/bus-accident-near-tumari-students-injured/

error: Content is protected !!