Dr.Sarji Joined BJP  | ಡಾ.ಧನಂಜಯ ಸರ್ಜಿ ಬಿಜೆಪಿಗೆ ಗ್ರ್ಯಾಂಡ್ ಎಂಟ್ರಿ, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸರ್ಜಿ ಹೇಳಿದ್ದೇನು?

Dr Dhananjay sarji BJP Joined

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಖ್ಯಾತ ಮಕ್ಕಳ ತಜ್ಞ, ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಅಪಾರ ಅಭಿಮಾನಿಗಳು, ಹಿತೈಷಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

READ | 1370 ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್, ಇದೇ ಮೊದಲು ಇಷ್ಟೊಂದು ಅನುದಾನಕ್ಕೆ ಒಪ್ಪಿಗೆ 

ಬೆಳಗ್ಗೆಯಿಂದಲೇ ಅವರ ಮನೆಯ ಮುಂದೆ ಹಬ್ಬದ ವಾತಾವರಣವಿತ್ತು. ಭಾನುವಾರ ಬೆಳಗ್ಗೆ 9 ಗಂಟೆಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೂ ಮುನ್ನ ಗೋಪಾಳಗೌಡ ಬಡಾವಣೆಯ ತಮ್ಮ ನಿವಾಸಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಇತರರು ಭೇಟಿ ನೀಡಿ ಶುಭ ಹಾರೈಸಿದರು.

ರಾಷ್ಟ್ರಪತಿ ಮಹಾತ್ಮಗಾಂಧೀಜಿ ಅವರು ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ಕೆಲವು ಸ್ವಾರ್ಥಿಗಳಿಂದಾಗಿ ಕಾಂಗ್ರೆಸ್ ಮುಂದುವರಿಸಲಾಯಿತು. ಈಗ ಕಾಂಗ್ರೆಸ್ ನಿರ್ನಾಮಗೊಂಡಿದೆ.
| ಕೆ.ಎಸ್.ಈಶ್ವರಪ್ಪ, ಶಾಸಕ

ಬಿಜೆಪಿ ಈ ಮುಂಚೆ ಮೇಲ್ವರ್ಗದ ಪಕ್ಷ ಎಂದೇ ಕರೆಸಿಕೊಂಡಿತ್ತು. ಆದರೀಗ, ಪರಿಸ್ಥಿತಿ ಬದಲಾಗಿದೆ. ಎಲ್ಲ ವರ್ಗದವರು ಪಕ್ಷದಲ್ಲಿದ್ದಾರೆ. ಸೇರ್ಪಡೆಗೊಂಡಿರುವವರಿಗೆ ಗೌರವ ಪೂರ್ವಕವಾಗಿ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
| ಬಿ.ವೈ.ರಾಘವೇಂದ್ರ, ಸಂಸದ

ಬಿಜೆಪಿ ಸಂಘಟನೆಗೆ ಇನ್ನಷ್ಟು ಬಲ
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಡಾ.ಧನಂಜಯ ಸರ್ಜಿ ಅವರು ಪಕ್ಷ ಸೇರ್ಪಡೆಯ ಮೂಲಕ ಸಂಘಟನೆ ಇನ್ನಷ್ಟು ಬಲಗೊಂಡಿದೆ. ಕಳೆದ ಕೆಲವು ದಿನಗಳಿಂದ ರಾಜಕೀಯ ದ್ರುವೀಕರಣ ಆರಂಭಗೊಂಡಿದ್ದು, ಬೇರೆಬೇರೆ ಸಮುದಾಯದ ಪ್ರಭಾವಿಗಳು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಈ ಹಿಂದೆ ಸೊರಬದ ರಾಜು ತಲ್ಲೂರು, ಪ್ರಭಾವಿ ನಾಯಕ ಎಚ್.ಟಿ.ಬಳಿಗಾರ ಸೇರ್ಪಡೆಯಾಗಿದ್ದರು ಎಂದರು.

READ | ಜನಶತಾಬ್ದಿ ಸೇರಿ ಶಿವಮೊಗ್ಗದಿಂದ ಹೊರಡುವ ವಿವಿಧ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ

ಅಟಲ್, ಮೋದಿ, ಯಡಿಯೂರಪ್ಪ ರೋಲ್ ಮಾಡಲ್
ಪಕ್ಷ ಸೇರ್ಪಡೆಯಾದ ಡಾ.ಧನಂಜಯ ಸರ್ಜಿ ಮಾತನಾಡಿ, ಬಿಜೆಪಿಯ ವರಿಷ್ಠ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ನಿಕಟ ಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ನಾನು ಪ್ರೇರಿತನಾಗಿದ್ದೇನೆ. ಅವರ ಅಭಿವೃದ್ಧಿ ಕಾರ್ಯಗಳಿಗೆ ಬೇರೆಯವರು ಸಾಟಿಯಿಲ್ಲ. ಅತ್ಯಂತ ಹೆಮ್ಮೆ ಮತ್ತು ಸಂತೋಷದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಕೆ.ಬಿ.ಅಶೋಕ ನಾಯ್ಕ್, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ನಟರಾಜ್, ಎಸ್.ಎನ್. ಚನ್ನಬಸಪ್ಪ, ಎನ್.ಜೆ.ನಾಗರಾಜ್, ರುದ್ರಪ್ಪ ಸರ್ಜಿ, ಜಗದೀಶ್ ಉಪಸ್ಥಿತರಿದ್ದರು.

error: Content is protected !!