Kuvempu university | ಕುವೆಂಪು ವಿವಿ ಅಡ್ಮಿಷನ್ ದಿನಾಂಕ ಫಿಕ್ಸ್, ಯಾವಾಗ ನಡೆಯಲಿದೆ ಕೌನ್ಸೆಲಿಂಗ್?

Kuvempu university

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ(Kuvempu university)ದ 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿ ಡಿಸೆಂಬರ್ 19 ಮತ್ತು 20ರಂದು ನಡೆಸುವುದಾಗಿ ವಿವಿ ತಿಳಿಸಿದೆ.

READ | ಗಮನಿಸಿ, ನಿಮ್ಮೂರಿಗೆ ಬರಲಿದ್ದಾರೆ ಲೋಕಾಯುಕ್ತರು, ಇಲ್ಲಿದೆ ಟೈಂ ಟೇಬಲ್

ವಿವಿಯ 2022-23ನೇ ಶೈಕ್ಷಣಿಕ ಸಾಲಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು ವಿಭಾಗಗಳ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸ್’ಗಳ ಪ್ರವೇಶಾತಿಗಾಗಿ ಡಿ.16ರಂದು ಮೆರಿಟ್ ಆಧಾರಿತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಡಿ.19ರಂದು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ ಸೀಟ್’ಗಳ ಪ್ರವೇಶಾತಿ ನಡೆಯಲಿದ್ದು, ಮರುದಿನ ಡಿ.20ರಂದು ಮೆರಿಟ್ ಕಮ್ ಪೇಮೆಂಟ್ ಸೀಟುಗಳ ಪ್ರವೇಶಾತಿಯು ನಡೆಯಲಿದೆ.
ಈ ಸಾಲಿನ ಪ್ರವೇಶಾತಿಯನ್ನು ಡಿ.17ರಂದು ನಡೆಸುವುದಾಗಿ ಈ ಮೊದಲು ತಿಳಿಸಲಾಗಿತ್ತು. 17ರಂದು ರಾಜ್ಯದಾದ್ಯಂತ ಎನ್.ಎಸ್.ಯು.ಐ. ವತಿಯಿಂದ ವಿದ್ಯಾರ್ಥಿಗಳ ಮುಷ್ಕರ ಇರುವುದರಿಂದ ಕೌನ್ಸಿಲಿಂಗ್ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.

https://suddikanaja.com/2022/12/16/shimoga-police-arrested-accused-from-other-states/

error: Content is protected !!