
ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಕಾರ್ಗಲ್ ಸಮೀಪದ ಜೋಗ (Jog) ಕೆಪಿಸಿ ಕಾಲೋನಿಯ ಕ್ರೀಡಾಂಗಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ದನದ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಾಲೋನಿ ಮಧ್ಯ ಭಾಗದಲ್ಲೇ ಘಟನೆ, ಬೆಚ್ಚಿಬಿದ್ದ ಜನ
ಘಟನೆ ನಡೆದಿರುವ ಸ್ಥಳದ ಸುತ್ತಲೂ ನಿಗಮದ ನೌಕರರ ಮನೆಗಳಿವೆ. ಚಿರತೆ ದಾಳಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಜ್ಜೆ ಗುರುತುಗಳ ಮೂಲಕ ಚಿರತೆ ಎಂದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜೋಗದ ಫಾತಿಮಾಪುರ, ವರ್ಕ್ ಮನ್ ಬ್ಲಾಕ್ ಈಗ ಎಸ್.ವಿಪಿ ಕಾಲೋನಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭೀತಿಯಲ್ಲಿದ್ದಾರೆ. ಬುಧವಾರ ರಾತ್ರಿಯೇ ಚಿರತೆಯ ಸೆರೆಗೆ ಬೋನು ಇಡಲಾಗಿತ್ತು. ಜತೆಗೆ, ಕಳೆದ 15 ದಿನಗಳಿಂದ ಜೋಗ ಭಾಗದಲ್ಲಿ ವಿವಿಧೆಡೆ ಬೋನು ಇಡಲಾಗಿತ್ತು.
Today arecanut rate | ಸತತ ಎರಡನೇ ದಿನವು ಏರಿಕೆ ಕಂಡ ಅಡಿಕೆ ದರ, 29/12/2022 ರ ಅಡಿಕೆ ದರ