ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNUR: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹಂಚಿನಸಿದ್ದಾಪುರದಲ್ಲಿ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥಗೊಂಡಿದ್ದಾರೆ.
ನೀರು ಕುಡಿದ ಕೆಲವು ಸಮಯದ ಬಳಿಕ ಜನರಲ್ಲಿ ಮೈತುರಿಕೆ, ಜ್ವರ ಹಾಗೂ ವಾಂತಿಯ ಲಕ್ಷಣಗಳು ಕಾಣಿಸಿಕೊಂಡಿದೆ. ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
READ | ಮಾರಕಾಸ್ತ್ರಗಳೊಂದಿಗೆ ರಸ್ತೆ ಬದಿ ನಿಂತಿದ್ದ ಗ್ಯಾಂಗ್, ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಅಸ್ವಸ್ಥರಾಗಲೇನು ಕಾರಣ?
ಜನರು ನೀರು ಕುಡಿದು ಅಸ್ವಸ್ಥರಾಗಿದ್ದೇ ತಕ್ಷಣ ನೀರುಗಂಟಿ ಟ್ಯಾಂಕ್ ಬಳಿ ಪರಿಶೀಲನೆ ನಡೆಸಲಾಗಿದೆ. ಆಗ ಟ್ಯಾಂಕಿನಲ್ಲಿ ಹಲ್ಲಿಗಳು ಬಿದ್ದು ಸತ್ತಿರುವುದು ಗಮನಕ್ಕೆ ಬಂದಿದೆ. ಸತ್ತ ಹಲ್ಲಿಗಳನ್ನು ತೆಗೆದುಹಾಕಿ ಅದೇ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಿದ್ದರಿಂದ ಆರೊಗ್ಯದಲ್ಲಿ ಏರುಪೇರಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ನೀರು ಸೇವಿಸಿದ ಜನರು ಅಸ್ವಸ್ಥಗೊಳ್ಳುವುದಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ.
ಹಲವು ತಿಂಗಳುಗಳಿಂದ ಟ್ಯಾಂಕ್ ಖಾಲಿ
ಈ ಓವರ್ ಹೆಡ್ ಟ್ಯಾಂಕಿಗೆ ಈ ಮುಂಚೆ ಕೊಳವೆ ಬಾವಿಯಿಂದ ನೇರವಾಗಿ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಕೆಲವು ದಿನಗಳಿಂದ ಜಲಜೀವನ ಮಿಷನ್ ಯೋಜನೆ ಅಡಿ ನೀರು ಪೂರೈಸುತ್ತಿದ್ದು, ಕೆಲವು ತಿಂಗಳುಗಳಿಂದ ಖಾಲಿ ಇದ್ದ ಟ್ಯಾಂಕ್ ಅನ್ನು ಸ್ವಚ್ಛಗೊಳಿಸದೇ ತುಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪ ಒಪ್ಪದ ಗ್ರಾಮ ಪಂಚಾಯಿತಿ
ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿದ ಬಳಿಕವೇ ನೀರು ತುಂಬಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ತಿಳಿಸಿದ್ದಾರೆ.
https://suddikanaja.com/2022/12/02/governor-tour-to-shivamogga-uttara-kannada-and-davanagere/