
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗಾಡಿಕೊಪ್ಪದ ಅಂಗಡಿಯೊಂದರ ಗೋದಾಮಿನಿಂದ ಕಳ್ಳತನ ಮಾಡಲಾಗಿದ್ದ ಭಾರಿ ಮೊತ್ತದ ಟೈಲ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
READ | ಅಬಕಾರಿ ಇಲಾಖೆಯಲ್ಲಿ ಶೀಘ್ರವೇ ನೇಮಕಾತಿ, ಕೆಪಿಎಸ್.ಸಿಗೆ ಪ್ರಸ್ತಾವನೆ, ಎಷ್ಟು ಹುದ್ದೆಗಳ ಭರ್ತಿ?
ಆಯನೂರಿನ ನಿರಂಜನ್ ಅಲಿಯಾಸ್ ನೀತು(26), ಸಂತೆಕಡೂರಿನ ಪಿ.ಸುನೀಲ್(24), ಗಾಡಿಕೊಪ್ಪ ನಿವಾಸಿಗಳಾದ ಲಿಖೇಶ್ ನಾಯ್ಕ್ ಅಲಿಯಾಸ್ ಬಾಟ್ಲಿ(51), ಗಣೇಶ್ ನಾಯ್ಕ್(34) ಬಂಧಿಸಿ ಅವರಿಂದ 2 ಲಕ್ಷ ರೂಪಾಯಿ ಮೌಲ್ಯದ ಒಟ್ಟು 190 ಬಾಕ್ಸ್ ಟೈಲ್ಸ್ ಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಟ್ರಾಕ್ಟರ್ ಅನ್ನು ವಶಕ್ಕೆ ಪಡೆಯಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯ ಪಿಐ ನೇತೃತ್ವದಲ್ಲಿ ಪಿಎಸ್.ಐ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Railway | ರೈಲಲ್ಲಿ ಮರೆತ್ತಿದ್ದ ಬ್ಯಾಗ್, ಮಾಲೀಕರಿಗೆ ವಾಪಸ್, ರೈಲ್ವೆ ಇಲಾಖೆ ಕಾರ್ಯಕ್ಕೆ ಶ್ಲಾಘನೆ