ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್)ಯ ವಿ.ಎಲ್.ಎಲ್ ಪ್ರಯೋಗಾಲಯ(VSL Lab)ಕ್ಕೆ ಅವಶ್ಯವಿರುವ ಟೆಕ್ನಿಕಲ್ ಆಫೀಸರ್ ಹುದ್ದೆಯ ನೇಮಕಾತಿ ದಿನಾಂಕವನ್ನು ಮುಂದೂಡಲಾಗಿದೆ.
READ | ಸಿಮ್ಸ್’ನಲ್ಲಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ ಹತ್ತು ದಿನ ಬಾಕಿ
ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ನೇಮಾಕಾತಿಗೆ ಈ ಹಿಂದೆ ಅಧಿಸೂಚನೆ ಹೊರಡಿಸಿದ್ದು, ಜನವರಿ 5ರಂದು ನೇರ ನೇಮಕಾತಿಯನ್ನು ನಡೆಯಬೇಕಿತ್ತು. ಆದರೆ, ಈ ನೇರ ಸಂದರ್ಶನವನ್ನು ಆಡಳಿತಾತ್ಮಕ ಕಾರಣಗಳಿಂದ ಜ.6ರಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು ಸಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.