Kuvempu University | ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ, ಹಣಕಾಸು‌‌ ಅಧಿಕಾರಿ ವರ್ಗಾವಣೆ

kuvempu vv 1

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ ಎರಡು ಪ್ರಮುಖ ಸ್ಥಾನಗಳನ್ನು ವರ್ಗಾವಣೆ ಮಾಡಲಾಗಿದ್ದು, ಈ ಸ್ಥಾನಕ್ಕೆ ಮೌಲ್ಯಮಾಪನ ಕುಲಸಚಿವರನ್ನು ನಿಯೋಜಿಸಲಾಗಿದೆ.

READ | ವಿವಿಧ ಹುದ್ದೆಗಳಿಗೆ ಪರಿಷ್ಕೃತ ಕೀ ಉತ್ತರ ಪ್ರಕಟ

ಕುಲಸಚಿವರಾಗಿ ಕಾರ್ಯ‌ನಿರ್ವಹಿಸುತ್ತಿದ್ದ ಕೆಎಎಸ್ ಸೂಪರ್ ಟೈಂ ಸ್ಕೇಲ್ ಅಧಿಕಾರಿ ಜಿ.ಅನುರಾಧ ಅವರನ್ನು ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಜವಾಬ್ದಾರಿಯನ್ನು ಪರೀಕ್ಷಾಂಗ ಕುಲಸಚಿವರಿಗೆ ವಹಿಸಲಾಗಿದೆ.

error: Content is protected !!