ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿವಿ(ಯ ಆವರಣದಲ್ಲಿ ಜನವರಿ 15ರಂದು ಬೆಳಗ್ಗೆ 9ರಿಂದ 11.45ರ ವರೆಗೆ ಗಾಳಿಪಟ ಹಬ್ಬ ಆಯೋಜಿಸಲಾಗಿದೆ ಎಂದು ಲಕ್ಷ್ಯ ಸ್ಕೂಲ್ ಮತ್ತು ಪೀಪಲ್ ಫಾರ್ ಎಜುಕೇಶನ್ ಸಂಸ್ಥೆಯ ಸಂಸ್ಥಾಪಕ ಅಜಯ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಯ ಸ್ಕೂಲ್ ಮತ್ತು ಪೀಪಲ್ ಫಾರ್ ಎಜುಕೇಶನ್ ಸೊಸೈಟಿಯಿಂದ ಮಕ್ಕಳಿಗೋಸ್ಕರ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
READ | ಶಾಲೆಗೆ ತೆರಳುವ ಸಿದ್ಧತೆಯಲ್ಲಿದ್ದ ಬಾಲಕನಿಗೆ ಹಾರ್ಟ್ ಅಟ್ಯಾಕ್, ಸಾವು
ಏನೆಲ್ಲ ಷರತ್ತುಗಳು ಅನ್ವಯ?
- 3 ವರ್ಷ ಮೇಲ್ಪಟ್ಟ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
- ಭಾಗವಹಿಸುವವರಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ.
- ಗಾಳಿಪಟ ಬೇಕಾದಲ್ಲಿ ಸ್ಥಳದಲ್ಲೇ ಕೊಡಲಾಗುವುದು. ಮಕ್ಕಳು ಸಹ ಮನೆಯಿಂದ ಸಿದ್ಧಪಡಿಸಿಕೊಂಡು ತರಬಹುದು.
- ಆಸಕ್ತ ಮಕ್ಕಳೊಂದಿಗೆ ಪೋಷಕರು ಸಹ ಹಾಜರಾಗಬಹುದು. ಆದರೆ, ಮಕ್ಕಳೇ ಗಾಳಿಪಟ ಹಾರಿಸಬೇಕು.
ಮಕ್ಕಳಲ್ಲಿ ಕೌಶಲ ಬೆಳೆಸಲು ಪೂರಕ
ಗಾಳಿಪಟ ಸ್ಪರ್ಧೆಯ ಮೂಲ ಉದ್ದೇಶ ಗಾಳಿಪಟ ಹಾರಿಸುವ ಕೌಶಲವನ್ನು ಬೆಳೆಸುವುದು, ಜತೆಗೆ, ನಮ್ಮ ಸಂಸ್ಕೃತಿಯ ಭಾಗವಾಗಿರುವ ಆಟಗಳನ್ನು ಉಳಿಸಿ ಬೆಳೆಸುವುದಾಗಿದೆ ಎಂದು ಸಂಸ್ಥೆಯ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವಿನ್ ಮಾಹಿತಿ ನೀಡಿದರು.
ಆಸಕ್ತರು ಕೂಡಲೇ ಹೆಸರು ನೋಂದಾಯಿಸಿ
ಹೆಚ್ಚಿನ ಮಾಹಿತಿಗೆ 9901881820 ಇಲ್ಲಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು. ಶಾಲೆಯ ಮುಖ್ಯಾಧ್ಯಾಪಕಿ ರಶ್ಮಿ, ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.