
ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕಳೆದ ಐದಾರು ದಿನಗಳಿಂದ ನಿರಂತರ ಬೆಲೆ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಶುಕ್ರವಾರ ಇಳಿಕೆಯಾಗಿದ್ದು, ಆಭರಣ ಪ್ರಿಯರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.
ಜನವರಿ 22ರಿಂದ 26ರವರೆಗೆ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಏಕಾಏಕಿ ಬೆಲೆಯಲ್ಲಿ ಇಳಿಕೆಯಾಗಿದೆ. ಜ.27ರಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 600 ರೂ. ಹಾಗೂ 24 ಕ್ಯಾರಟ್ ಗೆ 660 ರೂ. ಇಳಿಕೆಯಾಗಿದೆ.
ಕಳೆದ ಹತ್ತು ದಿನಗಳಲ್ಲಿ ಚಿನ್ನದ ಸರಾಸರಿ ಬೆಲೆಯು 22 ಕ್ಯಾ.ಗೆ 27,227 ರೂ. ಇದ್ದರೆ, 22 ಕ್ಯಾ.ಗೆ 52,450 ರೂ. ಇದೆ.
READ | ಶಿವಮೊಗ್ಗ ವಿಮಾನ ನಿಲ್ದಾಣ ಎಂಟ್ರಿ ನಿಷೇಧ, ಕಾರಣವೇನು?
ಬೆಳ್ಳಿಯ ಬೆಲೆಯಲ್ಲೂ ಇಳಿಕೆ
ಬೆಳ್ಳಿಯ ದರದಲ್ಲೂ ಇಳಿಕೆಯಾಗಿದೆ. ಶುಕ್ರವಾರ ಪ್ರತಿ ಕೆಜಿಗೆ 400 ರೂ. ಇಳಿಕೆಯಾಗಿದ್ದು, 74,600 ರೂ. ದರವಿದೆ. ಬೆಳ್ಳಿಯ ಬೆಲೆ ನಿರಂತರ ಏರಿಳಿತವಾಗುತ್ತಲೇ ಇದೆ.
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
18-01-2023 | 52,050 | 56,780 |
19-01-2023 | 52,050 | 56,780 |
20-01-2023 | 52,400 | 57,160 |
21-01-2023 | 52,300 | 57,110 |
22-01-2023 | 52,300 | 57,110 |
23-01-2023 | 52,400 | 57,160 |
24-01-2023 | 52,750 | 57,550 |
25-01-2023 | 52,750 | 57,550 |
26-01-2023 | 53,150 | 57,980 |
27-01-2023 | 52,550 | 57,320 |