ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಅವರು ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಬೇರೆ ಬೇರೆ ರಸ್ತೆಗಳಲ್ಲಿ ವಿವಿಧ ಸಮಯಗಳನ್ನು ನಿಗದಿಪಡಿಸಲಾಗಿದೆ.
ನಿರ್ಬಂಧಕ್ಕೇನು ಕಾರಣ?
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರು, ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳು ಓಡಾಡುವುದು ಕಷ್ಟವಾಗಿದೆ. ಅದರಲ್ಲಿ ವಿಶೇಷವಾಗಿ ಸರಕು ತುಂಬಿದ ಭಾರಿ ವಾಹನಗಳು ಬಂದಲ್ಲಿ ಅವುಗಳನ್ನು ತೆರವುಗೊಳಿಸಲು ಕನಿಷ್ಠ 15-20 ನಿಮಿಷ ಬೇಕಾಗುತ್ತದೆ. ಪರಿಣಾಮ ಆಂಬ್ಯುಲೆನ್ಸ್ ಗಳು, ಅಗ್ನಿಶಾಮಕ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತಿವೆ. ಈ ಎಲ್ಲ ಅಂಶಗಳನ್ನು ಮನಗಂಡು ನಗರದ ಒಳಗಡೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು ತಿರುಗಾಡುವ ಸಮಯವನ್ನು ಗುರುತಿಸಿ ಭಾರಿ ಮತ್ತು ಸರಕು ವಾಹನಗಳನ್ನು ನಗರದ ಕೆಲವು ಮಾರ್ಗಗಳಲ್ಲಿ ಸಂಚರಿಸದಂತೆ ಆದೇಶ ಹೊರಡಿಸಲಾಗಿದೆ.
READ | ಹೊಸ ವರ್ಷಕ್ಕೆ ಶಿವಮೊಗ್ಗ ನಗರದ ಈ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ
ಯಾವ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ, ಸಮಯವೇನು?
- ಇಮಾಮ್ ಬಾಡಾದಿಂದ ಸೀಗೆಹಟ್ಟಿ, ಬಿಬಿ ಸ್ಟ್ರೀಟ್, ಆರ್.ಎಸ್. ಪಾರ್ಕ್, ಕೋಟೆ ರಸ್ತೆ ಮೂಲಕ ಬೆಕ್ಕಿನ ಕಲ್ಮಠ ಸರ್ಕಲ್ವರೆಗೆ. (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ನಿಂದ ವಿನೋಬನಗರ ಪೊಲೀಸ್ ಚೌಕಿವರೆಗೆ(ವೀರರಾಣಿ
ಕೆಳದಿ ಚೆನ್ನಮ್ಮರಸ್ತೆಯಲ್ಲಿ) (ಬೆಳಗ್ಗೆ 8 ರಾತ್ರಿ 8 ರವರೆಗೆ) - ಎನ್.ಟಿ.ರಸ್ತೆಯ ಸಂದೇಶ್ ಮೋಟಾರ್ಸ್ ಸರ್ಕಲ್ ನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಹೆಲಿಪ್ಯಾಡ್ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಸಾಗರ ರಸ್ತೆಯ ಎ.ಪಿ.ಎಂ.ಸಿ. ಗೇಟ್ ವರೆಗೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಸವಳಂಗ ರಸ್ತೆಯಲ್ಲಿ ಮಹಾವೀರ ಸರ್ಕಲ್ನಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ನರ್ಸಿಂಗ್ ಹೋಮ್ ಸರ್ಕಲ್ವರೆಗೆ (ಅಕ್ಕಮಹಾದೇವಿ
ಸರ್ಕಲ್) (ಬೆಳಗ್ಗೆ 8 ರಾತ್ರಿ 8 ರವರೆಗೆ) - ಬಾಲರಾಜ್ ಅರಸ್ ರಸ್ತೆಯಲ್ಲಿ ಮಹಾವೀರ ಸರ್ಕಲ್ ನಿಂದ ಕೆ.ಇ.ಬಿ ಸರ್ಕಲ್ ಸಿಗ್ನಲ್ವರಗೆ (ಸರ್ವಜ್ಞ ಸರ್ಕಲ್) (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಬಿಎಚ್ ರಸ್ತೆಯಲ್ಲಿ ಅಮೀರ್ ಅಹಮದ್ ಸರ್ಕಲ್ ನಿಂದ ಕರ್ನಾಟಕ ಸಂಘ ಸರ್ಕಲ್ ಮಾರ್ಗವಾಗಿ ಶಂಕರಮಠ ಸರ್ಕಲ್ವರೆಗೆ (ಬೆಳಗ್ಗೆ 8 ಯಿಂದ 11ರವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಿಂದ ಗೋಪಿ ವೃತ್ತದವರೆಗೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಬಿಎಚ್ ರಸ್ತೆಯಿಂದ ವಿಶ್ವೇಶ್ವರಯ್ಯರಸ್ತೆ ಸಂಧಿಸುವ ಸ್ಥಳದಿಂದ) ಮಹಾವೀರ ವೃತ್ತದವರೆಗೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಚರ್ಚು ವೃತ್ತದಿಂದ ಮಹಾವೀರ ವೃತ್ತದವರೆಗೆ ಮತ್ತು ಮಹಾವೀರ್ ವೃತ್ತದಿಂದ ಚರ್ಚ ವೃತ್ತದ ವರೆಗೆ ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ ಭಾರಿ ವಾಹನಗಳ ಸಂಚಾರ ನಿಷೇಧಿಸಿರುವ ಅಧಿಸೂಚನೆ. (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಎಸ್.ಎಂ.ವಿ. ರಸ್ತೆ ಮೂಲಕ ಬಿಹೆಚ್ ರಸ್ತೆಯಿಂದ ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ ಭಾರಿ ವಾಹನಗಳ ಸಂಚಾರ ನಿಷೇಧಿಸಿರುವ ಅಧಿಸೂಚನೆ. (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಮಹಾವೀರ ವೃತ್ತದಿಂದ ಗೋಪಿ ವೃತ್ತದ ವರೆಗೆ ಹಾಗೂ ಗೋಪಿ ವೃತ್ತದಿಂದ ಮಹಾವೀರ ವೃತ್ತದ ವರೆಗೆ ಬಾಲ್ ರಾಜ್ ಅರಸ್ ರಸ್ತೆಯ ಮೂಲಕ ಮತ್ತು ಗೋಪಿ ವೃತ್ತದಿಂದ ಎಎ ವೃತ್ತದ ವರೆಗೆ ಮತ್ತು ಎಎ ಸರ್ಕಲ್ ನಿಂದ ಗೋಪಿ ವೃತ್ತದ ವರೆಗೆ ನೆಹರೂ ರಸ್ತೆ. (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಸರ್ ಎಂ.ವಿ. ರಸ್ತೆಯ ಮಹಾವೀರ್ ವೃತ್ತದಿಂದ ಬಸವೇಶ್ವರ ವೃತ್ತ (ಡಿವಿಎಸ್) ಮಾರ್ಗವಾಗಿ ಬಿಎಚ್ ರಸ್ತೆ ಸೇರುವ ಕಾನ್ವೆಂಟ್ ರಸ್ತೆ ಹಾಗೂ ವೀರಭದ್ರೇಶ್ವರ ಚಿತ್ರಮಂದಿರ ರಸ್ತೆ. (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆ ಸರ್ವಜ್ಞಾ ವೃತ್ತದಿಂದ (ಕೆಇಬಿ ಸರ್ಕಲ್) ಸರ್ಕಾರಿ ನೌಕರರ ಭವನದ ಬಡಾವಣೆ ರಸ್ತೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಅಶೋಕ ವೃತ್ತದಿಂದ ಎಎ ವೃತ್ತದ ವರೆಗೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಹಳೇ ತೀರ್ಥಹಳ್ಳಿ ರಸ್ತೆಯ ಕೃಷಿ ಕಛೇರಿಯ ಕ್ರಾಸ್ ರಸ್ತೆಯಿಂದ ಎಎ ವೃತ್ತದ ವರೆಗೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಕುವೆಂಪು ರಸ್ತೆ (ಬೆಳಗ್ಗೆ 8 ರಾತ್ರಿ 8 ರವರೆಗೆ)
- ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆ- ಲಕ್ಷ್ಮೀ ಮೆಡಿಕಲ್ ಕ್ರಾಸ್ ನಿಂದ ನೆಹರೂ ರಸ್ತೆಯವರೆಗೆ ಗಾರ್ಡನ್ ಏರಿಯಾ- 1, 2 ಮತ್ತು 3ನೇ ಕ್ರಾಸ್ಗಳಲ್ಲಿ ಎಲ್ ಎಲ್ಆರ್ರಸ್ತೆ- ಬಿಎಚ್. ರಸ್ತೆಯ ಗುಜರಿ ಅಂಗಡಿ ಕ್ರಾಸ್ನಿಂದ ಶೃಂಗಾರ ಶೋರೂಂವರೆಗೆ (ಬೆಳಗ್ಗೆ 10 ರಾತ್ರಿ 3 ರವರೆಗೆ)
- ವಿನೋಬನಗರ ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಕಡೆಗೆ ಹೋಗುವ ರಸ್ತೆ (ಬೆಳಗ್ಗೆ 8 ರಾತ್ರಿ 10 ರವರೆಗೆ)
- ಶಿವಮೊಗ್ಗ ನಗರದ ವಿನೋಬನಗರ ಮೊದಲನೇ ಹಂತ 6ನೇ ತಿರುವು (ಬೆಳಗ್ಗೆ 8 ರಾತ್ರಿ 10 ರವರೆಗೆ)
https://suddikanaja.com/2022/12/31/from-now-on-city-bus-will-not-stop-everywhere-notification-for-117-bus-stops-in-shimoga-city/