Yaduveer Wadiyar | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಯದುವೀರ ಒಡೆಯರ್, ಡಿವಿಎಸ್‍ನಲ್ಲಿ 3 ದಿನ ವಿಶೇಷ ಕಾರ್ಯಕ್ರಮ

yaduveera chamaraja wadiyar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿವಿಎಸ್ ಪದವಿ ಪೂರ್ವ ಸ್ವತಂತ್ರ ಕಾಲೇಜು ಆವರಣದಲ್ಲಿ ಜನವರಿ 4ರಿಂದ 6ರವರೆಗೆ ದೇಶೀಯ ವಿದ್ಯಾಶಾಲಾ ಸಮಿತಿ(ಡಿವಿಎಸ್)ಯ ಅಮೃತ ಮಹೋತ್ಸವದ ಸಮಾರೋಪ ಹಾಗೂ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ.

ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 4,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. 2018 ರಲ್ಲಿಯೇ 75ನೆ ವರ್ಷದ ಅಮೃತ ಮಹೋತ್ಸವವನ್ನು ಸಂಸ್ಥೆ ಆಚರಿಸಲಾಗಿದೆ. ಈಗ ಅಮೃತ ಮಹೋತ್ಸವ ಸಮಾರಂಭದ ಸಿದ್ಧತೆ ಮಾಡಲಾಗುತ್ತಿದೆ. ಡಿವಿಎಸ್ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದ ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು.
ಕೆ.ಎಸ್.ರುದ್ರಪ್ಪ ಕೊಳಲೆ, ಅಧ್ಯಕ್ಷ, ಡಿವಿಎಸ್

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್, 4ರಂದು ಬೆಳಗ್ಗೆ 11 ಕ್ಕೆ ಮೈಸೂರು ಮಹಾಸಂಸ್ಥಾನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಪಾಲ್ಗೊಳ್ಳಲಿದ್ದಾರೆ.

READ | ‘ಕಾಂತಾರ’ ಬಳಿಕ‌ ಅದೇ ಮಾದರಿಯ ಇನ್ನೊಂದು ಚಿತ್ರ ರಿಲೀಸ್’ಗೆ ಡೇಟ್ ಫಿಕ್ಸ್, ‘ವೈಶಂಪಾಯನ ತೀರ’ ಸಿನಿಮಾದಲ್ಲಿ ಅಂಥದ್ದೇನಿದೆ‌?

5ರಂದು ಬೆಳಗ್ಗೆ 11ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ (BY Raghavendra) ಉದ್ಘಾಟಿಸಲಿದ್ದಾರೆ. 6ರಂದು ಸಂಜೆ 4.30ಕ್ಕೆ ಅಮೃತ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.
ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿದಿನ ಸಂಜೆ ಡಿ.ವಿಎಸ್ ಸಂಸ್ಥೆಯ ವಿವಿಧ ಕಾಲೇಜು, ಹೈಸ್ಕೂಲ್, ಪದವಿ ಪೂರ್ವ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜ.6ರ ಬೆಳಗ್ಗೆ 11ಕ್ಕೆ ಡಿವಿಎಸ್ ಪಾಲಿಟೆಕ್ನಿಕ್, ಮಧ್ಯಾಹ್ನ 2ಕ್ಕೆ ಡಿವಿಎಸ್ ಸಂಜೆ ಕಾಲೇಜಿನ ಹಾಗೂ ಸಂಜೆ 6ಕ್ಕೆ ವಿಜ್ಞಾನ ಮತ್ತು ಕಲಾ, ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಎಸ್. ರಾಜಶೇಖರ್, ಸಹ ಕಾರ್ಯದರ್ಶಿ ಡಾ.ಎ.ಸತೀಶ್‍ಕುಮಾರ್ ಶೆಟ್ಟಿ, ಖಜಾಂಚಿ ಬಿ. ಗೋಪಿನಾಥ್, ನಿರ್ದೇಶಕರಾದ ಕೆ. ಬಸವಪ್ಪ ಗೌಡ, ಎಂ. ರಾಜು, ಡಾ.ಎಚ್. ಮಂಜುನಾಥ್, ಶಿಕ್ಷಕ ಪ್ರತಿನಿಧಿಗಳಾದ ಎಚ್.ಸಿ. ಉಮೇಶ್, ಡಾ.ಎಂ. ವೆಂಕಟೇಶ್ ಉಪಸ್ಥಿತರಿದ್ದರು.

https://suddikanaja.com/2023/01/03/vaikunta-ekadasi-2023-at-shimoga/

error: Content is protected !!