Shivamogga airport | ಶಿವಮೊಗ್ಗ ವಿಮಾನಕ್ಕೆ ಭೇಟಿ ನೀಡಲಿದ್ದಾರೆ ಡಿಜಿಸಿಎ ಅಧಿಕಾರಿಗಳು, ಇದು ಅತೀ ಪ್ರಮುಖ ಭೇಟಿ ಏಕೆ?

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ (shimoga airport)ಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA) ಅಧಿಕಾರಿಗಳ ತಂಡವು ಭೇಟಿ ನೀಡಲಿದೆ.

READ | ಶಿಮುಲ್‌ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಖಾಲಿ‌ ಹುದ್ದೆಗಳ ಭರ್ತಿಗೆ ಅಧಿಸೂಚನೆ

ವಿಮಾನ ನಿಲ್ದಾಣಕ್ಕೆ ಫೆಬ್ರವರಿ 8 ರಿಂದ 10ನೇ ತಾರೀಕಿನೊಳಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavendra) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ‌ ಅವರು, ವಿಮಾನ ನಿಲ್ದಾಣವನ್ನು ಪರಿಶೀಲಿಸಿದ ಬಳಿಕ ಪರವಾನಗಿಯನ್ನು ನೀಡಲಾಗುವುದು. ಜತೆಗೆ, ಇದು ಕೊನೆಯ ಪರಿಶೀಲನೆಯಾಗಲಿದೆ. ಹೀಗಾಗಿ, ಡಿಜಿಸಿಎ ತಂಡದ ಭೇಟಿ ಪ್ರಮುಖವಾಗಿದೆ ಎಂದರು.
ಎಎಐನಿಂದ ವಿಮಾನ ನಿಲ್ದಾಣ ನಿರ್ವಹಣೆ
ವಿಮಾನ ನಿಲ್ದಾಣ(airport)ವನ್ನು ರಾಜ್ಯ ಸರ್ಕಾರ(state government)ವೇ ನಿರ್ವಹಣೆ ಮಾಡಲಿದೆ. ತಾಂತ್ರಿಕವಾಗಿ ಕೇಂದ್ರದ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ನಿರ್ವಹಿಸಲಿದೆ ಎಂದು ಹೇಳಿದರು.
ಟೂರಿಸಂ ರೋಡ್ ಶೋ
ರಾಜ್ಯದ ಹಲವು ವಿಮಾನ ನಿಲ್ದಾಣಗಳು ಕಾಂಕ್ರೀಟ್ ಮ್ಯೂಸಿಯಂಗಳಂತಾಗಿವೆ. ನಮ್ಮ ವಿಮಾನ ನಿಲ್ದಾಣ ಹಾಗಾಗಬಾರದು ಎಂಬ ಉದ್ದೇಶದಿಂದ ಶಿವಮೊಗ್ಗದಲ್ಲಿ ಟೂರಿಸಂ ರೋಡ್ ಶೋ ಆಯೋಜಿಸಲಾಗಿದೆ. ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿಯಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ನೀಡಿದ್ದೇನೆ. ರಾಷ್ಟ್ರಮಟ್ಟದ ಗೈಡ್ ಗಳನ್ನು ಕರೆತಂದು ರೋಡ್ ಶೋ ನಡೆಸಲಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಕೆ.ಬಿ.ಅಶೋಕ್‌ ನಾಯ್ಕ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಶಿವರಾಜ್, ಅಣ್ಣಪ್ಪ, ಬಿ.ಕೆ. ಶ್ರೀನಾಥ್, ಹರಿಕೃಷ್ಣ, ಚಂದ್ರಶೇಖರ್ ಮತ್ತಿತರರು ಇದ್ದರು.

error: Content is protected !!