
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿಕ್ಕಮಗಳೂರು (chikkamagalur) ಜಿಲ್ಲೆ ಬಾಳೆಹೊನ್ನೂರಿನ (Balehonnur) ವ್ಯಕ್ತಿಯೊಬ್ಬರು ಅಡಿಕೆ ಖರೀದಿಗೆಂದು ಶಿವಮೊಗ್ಗ(shimoga)ಕ್ಕೆ ಬಂದಾಗ ವಾಹನ ಅಡ್ಡಗಟ್ಟಿ ಲಕ್ಷಾಂತರ ಹಣ ದರೋಡೆ ಮಾಡಿದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಗೋಪಾಳದ ಮಂಜನಾಯ್ಕ ಅಲಿಯಾಸದ ಮಂಜು(35),
ಶಿಕಾರಿಪುರ ಪಟ್ಟಣದ ಆಸೀಫ್ ವುಲ್ಲಾ ಅಲಿಯಾಸ್ ಆಸೀಫ್ (32), ಕೊನಗವಳ್ಳಿಯ ಗಣೇಶ್ ನಾಯ್ಕ ಅಲಿಯಾಸ್ ಗಣು(28), ಟ್ಯಾಂಕ್ ಮೊಹಲ್ಲಾದ ದಾವಲ್ ಬಡಗಿ(35), ಆರ್.ಎಂ.ಎಲ್.ನಗರದ ರಿಜ್ವಾನ್ ಅಹ್ಮದ್ ಅಲಿಯಾಸ್ ಮಹ್ಮದ ರಿಜ್ವಾನ್(48) ಬ.ಧಿತ ಆರೋಪಿಗಳು. ಇವರ ಬಳಿಯಿಂದ ₹3.15 ಲಕ್ಷ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
READ | ನಾಳೆ ಹರಕೆರೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ನಡೆದಿದ್ದೇನು?
ಫೆ.6ರಂದು ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಸುರೇಶ್ ಕುಮಾರ್ ಬಂದಿದ್ದರು. ಆಗ ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿ ಅಡಿಮೆ ಇದ್ದು, ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ ಸುರೇಶ್ ಕುಮಾರ್ ಮತ್ತು ಅವರ ಸ್ನೇಹಿತ ಸಂತೋಷ್ ತಿಳಿಸಿದ್ದ ಸ್ಥಳಕ್ಕೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ಮಾಡಿ, ₹5 ಲಕ್ಷ ಹಣವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆಗೆ ತಂಡ ರಚಿಸಿದ್ದ ಪೊಲೀಸ್ ಇಲಾಖೆ
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚಲು ಎಸ್ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಲರಾಜ್ ಮೇಲ್ವಿಚಾರಣೆಯಲ್ಲಿ ತುಂಗಾನಗರ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ರಾಜುರೆಡ್ಡಿ ಬೆನ್ನೂರು, ಸಹಾಯಕ ನಿರೀಕ್ಷಕ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ ಮತ್ತು ಹರೀಶ್ ಅವರಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿರುತ್ತದೆ.