
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೋಟೆ ಪೊಲೀಸ್ ಠಾಣೆ(Kote police station)ಯಲ್ಲಿ ದಾಖಲಾದ ಒಂದು ಪ್ರಕರಣದ ತನಿಖೆ ವೇಳೆ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿಯ ಹಂಚಿನ ಸಿದ್ದಾಪುರ (siddapura) ಗ್ರಾಮದ ಆರ್. ಅರುಣ್(22) ಬಂಧಿತ ಆರೋಪಿ.
READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಸಂಸದ ರಾಘವೇಂದ್ರ ಹೇಳಿದ್ದೇನು?
ಏನಿದು ಪ್ರಕರಣ?
ಶಿವಮೊಗ್ಗ ನಗರದ ಆನಂದ್ ರಾವ್ ಬಡಾವಣೆಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಶಂಕರ ಮಠ ರಸ್ತೆಯಲ್ಲಿ ನಿಲ್ಲಿಸಿದ್ದು, ಯಾರೋ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಬೈಕ್ ಮಾಲೀಕ ಅಬ್ದುಲ್ ರಜಾಕ್ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸಿಇಎನ್ ಠಾಣೆಯ ಪಿಐ ಸಂತೋಷ್ ಪಾಟೀಲ್ ಅವರ ನೇತೃತ್ವದಲ್ಲಿ ಕೋಟೆ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಿ.ಆರ್ ಕೊಪ್ಪದ್, ಸಹಾಯಕ ಪೊಲೀಸ್ ಉಪ ನಿರೀಕ್ಷಕ ಶ್ರೀಹರ್ಷ, ಸಿಬ್ಬಂದಿ ಅಣ್ಣಪ್ಪ, ನಾಗರಾಜ್, ಪ್ರಕಾಶ್, ಜಯಶ್ರೀ ಅವರೊನ್ನಳಗೊಂಡ ಆರೋಪಿಯನ್ನು ಬಂಧಿಸಿದೆ.
₹1 ಲಕ್ಷ ಮೌಲ್ಯದ ಬೈಕ್ ವಶಕ್ಕೆ
ಕೋಟೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಒಟ್ಟು 4 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಪ್ರಕರಣಗಳಲ್ಲಿ ಕಳ್ಳತನ ಮಾಡಲಾದ ಅಂದಾಜು ₹1,00,000 4 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.