Science museum | ಸಹ್ಯಾದ್ರಿ ಕಾಲೇಜಿನಲ್ಲಿ ತಲೆ ಎತ್ತಲಿದೆ ಸೈನ್ಸ್ ಮ್ಯೂಸಿಯಂ, ಶಿವಮೊಗ್ಗದವರಿಗೇನು ಪ್ರಯೋಜನ?

science museum

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿಜ್ಞಾನ ಆಸಕ್ತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸೈನ್ಸ್ ಮ್ಯೂಸಿಯಂ ತಲೆ ಎತ್ತಲಿದ್ದು, ಇದರ ಪ್ರಯೋಜನ ಮಲೆನಾಡಿನ ಜನರಿಗೆ ಲಭಿಸಲಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಇದು ಒಟ್ಟು ₹15.20 ಕೋಟಿ ಯೋಜನೆಯಾಗಿದೆ. ಮ್ಯೂಸಿಯಂ ನಿರ್ಮಾಣಕ್ಕೆ ₹11.70 ಕೋಟಿ ಹಾಗೂ ನಿರ್ವಹಣೆಗೆ ₹3.50 ಕೋಟಿ ನಿಗದಿಪಡಿಸಲಾಗಿದೆ ಎಂದರು.
ಖೇಲೋ ಇಂಡಿಯಾ ಯೋಜನೆ ಅಡಿ ಸಹ್ಯಾದ್ರಿ ಕಾಲೇಜಿನಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಬೇಕು ಎಂದುಕೊಳ್ಳಲಾಗಿತ್ತು. ಆದರೆ, ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಾಲೇಜು ಆವರಣದಲ್ಲಿ ಶೈಕ್ಷಣಿಕ ಬಳಕೆಯ ಉದ್ದೇಶದಿಂದ ಸೈನ್ಸ್ ಮ್ಯೂಸಿಯಂ ತರಲಾಗುತ್ತಿದೆ. ಇದರ ಪ್ರಯೋಜನ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಆಸಕ್ತರಿಗೆ ಆಗಲಿದೆ ಎಂದು ತಿಳಿಸಿದರು.

READ | ಅಡಿಕೆ ಬೆಳೆಗಾರರ ಸಮಸ್ಯೆಗಳ ಚರ್ಚೆಗೆ ವೇದಿಕೆಯಾದ ಕನ್ನಡ ಸಾಹಿತ್ಯ ಸಮ್ಮೇಳನ, ಸರ್ವಾಧ್ಯಕ್ಷರು ಹೇಳಿದ್ದೇನು?

ವಿಜ್ಞಾನ ವಸ್ತು ಸಂಗ್ರಹಾಲಯದ ಪ್ರಯೋಜನಗಳೇನು?

  • ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದಲ್ಲದೇ ಸಂಶೋಧನಾ ಚಟುವಟಿಕೆಗಳ ಕಡೆಗೆ ಒತ್ತು ನೀಡುವುದು.
  • ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೂ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಿ ಆಸಕ್ತಿಯನ್ನು ಹೆಚ್ಚಿಸುವುದು.

ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಕೆ.ಬಿ.ಅಶೋಕ್‌ ನಾಯ್ಕ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಶಿವರಾಜ್, ಅಣ್ಣಪ್ಪ, ಬಿ.ಕೆ. ಶ್ರೀನಾಥ್, ಹರಿಕೃಷ್ಣ, ಚಂದ್ರಶೇಖರ್ ಮತ್ತಿತರರು ಇದ್ದರು.

error: Content is protected !!