ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರದ ಅಮೃತ್ ಭಾರತ್ ಯೋಜನೆ (Amrit Bharat Station Scheme) ಅಡಿ ಜಿಲ್ಲೆಯ ಮೂರು ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಅಡಿ ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿಸಲಾಗಿದೆ.
ದೇಶದಾದ್ಯಂತ ₹30 ಸಾವಿರ ಕೋಟಿಯನ್ನು ಈ ಯೋಜನೆ ಅಡಿ ಮೀಸಲಿಟ್ಟಿದೆ. ಶಿವಮೊಗ್ಗ ನಗರ (Shimoga railway station), ಸಾಗರದ ಜಂಬಗಾರು (Sagar Jambagaru) ಮತ್ತು ತಾಳಗುಪ್ಪ (Talaguppa) ರೈಲ್ವೆ ನಿಲ್ದಾಣಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ 55 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಆರಂಭ, ಏನಂತಾರೆ ಜನ?
ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ₹150 ಕೋಟಿ ಮಂಜೂರು
ಬಹು ನಿರೀಕ್ಷೆಯ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್(Budjet)ನಲ್ಲಿ ₹150 ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ವೇಗ ಸಿಗಲಿದೆ. ಶಿವಮೊಗ್ಗದಿಂದ ರಾಣೆಬೆನ್ನೂರು (Ranebennur) ರೈಲ್ವೆ ಮಾರ್ಗ 90 ಕಿ.ಮೀ. ದೂರವಿದ್ದು, ಒಟ್ಟು 12 ನಿಲ್ದಾಣಗಳು ಈ ಮಾರ್ಗದಲ್ಲಿ ಸಿಗಲಿವೆ.