ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹತ್ತು ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಿಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.
READ | ಶಿವಮೊಗ್ಗದ ಮೂರು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ, ಯಾವ್ಯಾವ ನಿಲ್ದಾಣಗಲ ಆಯ್ಕೆ?
- ರೈಲು ಸಂಖ್ಯೆ 06243 ಕೆ.ಎಸ್.ಆರ್ ಬೆಂಗಳೂರು – ಹೊಸಪೇಟೆ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಕೆ.ಎಸ್.ಆರ್ ಬೆಂಗಳೂರಿನಿಂದ ಮಾರ್ಚ್ 12 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 06244 ಹೊಸಪೇಟೆ – ಕೆ.ಎಸ್.ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಹೊಸಪೇಟೆ ನಿಲ್ದಾಣದಿಂದ ಮಾರ್ಚ್ 13 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 06563 ಯಶವಂತಪುರ – ಮುರ್ಡೇಶ್ವರ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಮಾರ್ಚ್ 25 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 1 ರಿಂದ ಜೂನ್ 24ರ ವರೆಗೆ 13 ಟ್ರಿಪ್ಗಳಿಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 06564 ಮುರ್ಡೇಶ್ವರ – ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲು ಮುರ್ಡೇಶ್ವರದಿಂದ ಮಾರ್ಚ್ 26 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 2 ರಿಂದ ಜೂನ್ 25 ರವರೆಗೆ 13 ಟ್ರಿಪ್ಗಳಿಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 07355 ಎಸ್.ಎಸ್.ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಮಾರ್ಚ್ 25 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 1 ರಿಂದ ಜೂನ್ 24 ರವರೆಗೆ 13 ಟ್ರಿಪ್ಗಳಿಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ರಾಮೇಶ್ವರಂನಿಂದ ಮಾರ್ಚ್ 26 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 2 ರಿಂದ ಜೂನ್ 25 ರವರೆಗೆ 12 ಟ್ರಿಪ್ಗಳಿಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 06545 ಯಶವಂತಪುರ – ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಮಾರ್ಚ್ 31 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗುತ್ತದೆ
- ರೈಲು ಸಂಖ್ಯೆ 06546 ವಿಜಯಪುರ – ಯಶವಂತಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ವಿಜಯಪುರ ನಿಲ್ದಾಣದಿಂದ ಏಪ್ರಿಲ್ 1 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜುಲೈ 1 ರವರೆಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಜಂಕ್ಷನ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ವಿಜಯಪುರ ನಿಲ್ದಾಣದಿಂದ ಮಾರ್ಚ್ 31 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗುತ್ತದೆ.
- ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ – ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಮಂಗಳೂರು ಜಂಕ್ಷನ್ನಿಂದ ಏಪ್ರಿಲ್ 1 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜುಲೈ 1 ರವರೆಗೆ ವಿಸ್ತರಿಸಲಾಗುತ್ತದೆ.
ಈ ಮೇಲಿನ ರೈಲುಗಳ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಸಿಪಿಆರ್.ಓ ಅನಿಶ್ ಹೆಗ್ಡೆ ತಿಳಿಸಿದ್ದಾರೆ.
Railway station | ಶಿವಮೊಗ್ಗ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ನಾಮಕರಣ, ಏನೇನು ಹೆಸರು?