ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಬುಧವಾರ ಭರ್ಜರಿ ಹೋಳಿ ಹಬ್ಬ (Holi Festival) ಆಚರಿಸಲಾಯಿತು. ಗೋಪಿ ವೃತ್ತದಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಯುವಕ, ಯುವತಿಯರು, ಮಹಿಳೆಯರು ಮತ್ತು ಪುರುಷರು ರೈನ್ಸ್ ಡ್ಯಾನ್ಸ್(Rain Danse)ನಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕೆ.ಆರ್.ಪುರಂ ರಸ್ತೆ, ಕೋಟೆ ರಸ್ತೆ, ಗಾಂಧಿಬಜಾರ್, ದುರ್ಗಿಗುಡಿ, ನೂರಡಿ ರಸ್ತೆ ಸೇರಿದಂತೆ ಹಲವೆಡೆ ಬಣ್ಣ ಎರಚಿ ಹಬ್ಬ ಆಚರಿಸಲಾಯಿತು.
READ | ಶಿವಮೊಗ್ಗದಲ್ಲಿ ಹೋಳಿ ಹಬ್ಬದಂದೇ ಬೈಕ್ ಸವಾರರಿಗೆ ಶಾಕ್ ನೀಡಿದ ಪೊಲೀಸ್
ಗೋಪಿ ವೃತ್ತದಲ್ಲಿ ಡಿಜೆ ಸದ್ದು
ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗೋಪಿ ಸರ್ಕಲ್ನಲ್ಲಿ ಡಿಜೆ, ನೀರು, ಬಣ್ಣದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಯುವಕರು ಆಗಮಿಸಿ ಬಣ್ಣದ ಹಬ್ಬದಲ್ಲಿ ಭಾಗಿಯಾದರು. ಉಚಿತವಾಗಿ ಬಣ್ಣದ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಬ್ಯಾರಿಕೆಡ್ ವ್ಯವಸ್ಥೆ ಮಾಡಿ ರೈನ್ ಡ್ಯಾನ್ಸ್ ಮಾಡಲಾಯಿತು. ಸಮಿತಿಯಿಂದ 1 ಸಾವಿರ ಕೆ.ಜಿ. ಬಣ್ಣದ ವ್ಯವಸ್ಥೆಯನ್ನು ಮಾಡಲಾಗಿತ್ತು.
Extension of trains | ಹತ್ತು ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ಯಾವ್ಯಾವ ರೈಲು? ಇಲ್ಲಿದೆ ಮಾಹಿತಿ