
ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗ ಪ್ರಕಟಿಸಿದೆ.
ನವದೆಹಲಿಯಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧಿಕಾರಿಗಳು, ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಒಂದೇ ಹಂತದಲ್ಲಿ ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾ.29ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.
READ | ಜೋರಾಯ್ತು ಒಳ ಮೀಸಲಾತಿ ಕಿಚ್ಚು, ತಾಂಡಾಗಳಲ್ಲಿ ಮತದಾನ ಬಹಿಷ್ಕಾರ ಎಚ್ಚರಿಕೆ, ಎಲ್ಲಿ ಏನಾಯ್ತು?
ವೇಳಾಪಟ್ಟಿ ಕೆಳಗಿನಂತಿದೆ
- ಏ.13ರಂದು ಅಧಿಸೂಚನೆ
- ಏ.20 ನಾಮಪತ್ರ ಸಲ್ಲಿಕೆ ಕೊನೆ ದಿನಾಂಕ
- ಏ.21ರಂದು ನಾಮಪತ್ರ ಪರಿಶೀಲನೆ
- ಏ.24 ನಾಮಪತ್ರ ವಾಪಸ್ ಗೆ ಕೊನೆ ದಿನಾಂಕ
- ಮೇ 10 ಮತದಾನ ನಡೆಯಲಿದೆ
- ಮೇ 13 ಫಲಿತಾಂಶ ಪ್ರಕಟ