
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ-ಹಳಿಯಾಳ ಹಾಗೂ ಟಾಟಾ ಮೋಟಾರ್ಸ್- ಧಾರವಾಡ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, 20-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಏಪ್ರಿಲ್ 10 ರೊಳಗಾಗಿ ಕೆನರ ಬ್ಯಾಂಕ್ ದೇಶಪಾಂಡೆ ಆರ್ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325, ವಿಳಾಸಕ್ಕೆ ಕಳುಹಿಸುವುದು. ಅಥವಾ ಮೊ.ಸಂ.: 08284-298547 / 9449782425/ 9632143217ಗಳಿಗೆ ವಾಟ್ಸ್ಪ್ ಮೂಲಕ ಕಳುಹಿಸುವುದು. ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
READ | ಪಿಯುಸಿ, ನರ್ಸಿಂಗ್ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಉದ್ಯೋಗ, ಎಷ್ಟು ಹುದ್ದೆಗಳ ನೇಮಕಾತಿ?
ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ-ಹಳಿಯಾಳ ಹಾಗೂ ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿ. ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಜೆಸಿಬಿ ಆಪರೇಟರ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, 18-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಏಪ್ರಿಲ್ 25 ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ -581325, ವಿಳಾಸಕ್ಕೆ ಕಳುಹಿಸುವುದು. ಅಥವಾ ಮೊ.ಸಂ.: 08284-298547/ 9449782425 /9632143217 ಗಳಿಗೆ ವಾಟ್ಸ್ಪ್ ಮೂಲಕ ಕಳುಹಿಸುವುದು. ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ನೀಡಲಾಗುವುದು.