
ಸುದ್ದಿ ಕಣಜ.ಕಾಂ ಬೆಂಗಳೂರು
SHIVAMOGGA: ವಿನೋಬನಗರ(Vinoba Nagar)ದ ನಿವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ. ಎಂಬ ಕಾರ್ಖಾನೆಯ ಪರವಾನಗಿ ರದ್ದುಪಡಿಸಲು ಲಂಚ ಪಡೆದ ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ (Department of Factories and Boilers) ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಎಂಬುವವರನ್ನು ಲೋಕಾಯುಕ್ತರು (Lokayukta) ಬಂಧಿಸಿದ್ದಾರೆ.
15 ಸಾವಿರ ಪಡೆದೂ ನೀಡಿಲ್ಲ ಲೈಸೆನ್ಸ್
ರಾಕೇಶ್ ಪಟೇಲ್ ಕಚೇರಿಗೆ ಭೇಟಿ ನೀಡಿ ತಮ್ಮ ಕಾರ್ಖಾನೆಯ ಲೈಸನ್ಸ್ (license) ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕೋರಿದ ಸಮಯದಲ್ಲಿ ಕಚೇರಿಯ ವಿಠಲ್ ನಾಯ್ಕ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 15,000 ರೂ.ಗಳನ್ನು ಪಡೆದಿರುತ್ತಾರೆ. ಆದರೂ ಲೈಸೆನ್ಸ್ ರದ್ದತಿ ಪ್ರಮಾಣ ಪತ್ರ ನೀಡಿರುವುದಿಲ್ಲ.
READ | ಹೆಲ್ತ್ ಆ್ಯಂಡ್ ವೆಲ್ನೆಸ್ ಸೆಂಟರ್’ಗಳಲ್ಲಿ ಉದ್ಯೋಗ, ಎಲ್ಲೆಲ್ಲಿ ಅವಕಾಶ?
ಇನ್ನೂ 30 ಸಾವಿರಕ್ಕೆ ಡಿಮ್ಯಾಂಡ್
ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ವಿಚಾರಿಸಿದಾಗ ಅವರು ನಾವು ತಿಳಿಸಿದ ಹಣ ನೀಡಿದ ನಂತರ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದರು. ಆರ್ಥಿಕವಾಗಿ ನಷ್ಟದಲ್ಲಿದ್ದರೂ ಸಹ ಪುನಃ 30,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ರಾಕೇಶ್ ಪಟೇಲ್’ಗೆ ಲಂಚದ ಹಣ ಕೊಡಲು ಇಷ್ಟವಿಲ್ಲದ ಕಾರಣ ಮಾ.3ರಂದು ಲೋಕಾಯುಕ್ತ ಕಚೇರಿಗೆ ಬಂದು ಮಾಹಿತಿ ನೀಡಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ.
ಅದರಂತೆ ಆಪಾದಿತ ವಿಠಲ್ ನಾಯ್ಕ ತಮ್ಮ ಕಚೇರಿಯಲ್ಲಿ ಪಟೇಲ್ ಅವರಿಂದ ಲಂಚದ ಹಣ 30,000 ರೂ. ಪಡೆಯುತ್ತಿರುವ ಸಮಯದಲ್ಲಿ ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಕಚೇರಿ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮತ್ತು ಶಿವಮೊಗ್ಗ ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ ನಡೆಸಿದ ತಂಡ
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಚ್.ರಾಧಾಕೃಷ್ಣ ತನಿಖೆ ಕೈಗೊಂಡು ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಸಿಬ್ಬಂದಿಯಾದ ಪ್ರಸನ್ನ, ಬಿ.ಲೋಕೇಶಪ್ಪ, ವಿ.ಎ.ಮಹಂತೇಶ್, ಬಿ.ಟಿ.ಚನ್ನೇಶ್, ಪ್ರಶಾಂತ್ ಕುಮಾರ್, ರಘುನಾಯ, ಸುರೇಂದ್ರ, ಅರುಣ್ ಕುಮಾರ್, ದೇವರಾಜ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ್, ಪ್ರದೀಪ್, ತರುಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Power cut | ಶಿವಮೊಗ್ಗದಲ್ಲಿ ಮೂರು ದಿನ ಕರೆಂಟ್ ಇರಲ್ಲ, ಯಾವ್ಯಾವ ಪ್ರದೇಶಗಳಲ್ಲಿ ಕಟ್?