
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: “ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಹಾಗೊಮ್ಮೆ ಸ್ಪರ್ಧಿಸಿದರೂ ಸೋಲುತ್ತಾರೆ” ಎಂದು ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅಭಿಪ್ರಾಯಪಟ್ಟರು.
READ | ಲಕ್ಷ್ಮೀ ಟಾಕೀಸ್ ಬಂದ್, 4 ದಶಕ ಮನೋರಂಜನೆ ನೀಡಿದ ಥಿಯೇಟರ್ ನೆನಪು ಮಾತ್ರ, ಮೊದಲು ಪ್ರದರ್ಶನಗೊಂಡ ಚಿತ್ರ ಯಾವುದು?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೋಲಾರದಲ್ಲಿ ಸುಮಾರು 61-65 ಸಾವಿರ ದಲಿತರ ಮತಗಳಿವೆ. ಈ ಹಿಂದೆ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಮುನಿಯಪ್ಪರನ್ನು ಇವರ ಶಿಷ್ಯರು ಸೋಲಿಸಿದ್ದು ನೆನಪಿದೆ. ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಕಕ್ಕೆ ಸರಿಸಿದ ಸಿಟ್ಟು ದಲಿತ ಸಮಾಜಕ್ಕಿದೆ. ಜೊತೆಗೆ 40 ಸಾವಿರ ಒಕ್ಕಲಿಗ ವೋಟುಗಳಿವೆ. ಅವರೂ ಕಾಯುತ್ತಿದ್ದಾರೆ. ದೇವೆಗೌಡರಿಗೆ ಮಾಡಿದ ದ್ರೋಹ ಅವರಿಗೂ ಗೊತ್ತಿದೆ. ಇನ್ನು ಕುರುಬರ ವೋಟ್ ಗಳಿವೆ. ಅವರು ವರ್ತೂರು ಪ್ರಕಾಶ್ ಗೆ ಬೆಂಬಲ ಕೊಟ್ಟಿದ್ದಾರೆ. ಕೋಲಾರದಲ್ಲಿ ಅವರಿಗೆ ಉಳಿಯುವುದು ಮುಸ್ಲಿಂ ವೋಟುಗಳು ಮಾತ್ರ. ಹಾಗಾಗಿ ಕೋಲಾರದಲ್ಲಿ ನಿಲ್ಲಲ್ಲ. ನಿಂತರೂ ಸಿದ್ದರಾಮಯ್ಯ ಸೋಲುತ್ತಾರೆ ಎಂದು ವಿಶ್ಲೇಷಿಸಿದರು.
ಚಾಮುಂಡೇಶ್ವರಿ, ಬಾದಾಮಿಯ ಜನರಿಗೂ ಅವರ ಹಣೆಬರಹ ಗೊತ್ತು. ಕಾಂಗ್ರೆಸ್ ನಲ್ಲಿ ಎಲ್ಲಿ ಬೇಕೋ ಅಲ್ಲಿ ತೀರ್ಮಾನ ಮಾಡುವ ಕೆಲವು ನಾಯಕರಿದ್ದಾರೆ. ಚುನಾವಣೆಯಲ್ಲಿ ಸೋತರೂ ವಿಶ್ವಾಸ ಪಡೆಯುವ ಕೆಲಸ ಮಾಡಬೇಕು.
– ಕೆ.ಎಸ್.ಈಶ್ವರಪ್ಪ, ಶಾಸಕ
ರಾಷ್ಟ್ರದ್ರೋಹಿ ಸಂಘಟನೆಯೊಂದಿಗೆ ನೇರ ಹೊಂದಾಣಿಕೆ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರದ್ರೋಹಿ ಸಂಘಟನೆಗಳೊಂದಿಗೆ ನೇರ ಹೊಂದಾಣಿಕೆ ಮಾಡುತ್ತಿದೆ ಎಂದು ಆರೋಪಿಸಿದ ಈಶ್ವರಪ್ಪ, ರಾಜ್ಯದ ಜನರು ಗಮನಿಸಬೇಕು ಎಂದು ಹೇಳಿದರು.
ರಾಷ್ಟ್ರದ್ರೋಹಿ ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಕೆಲಸ ಮಾಡುತ್ತಿವೆ. ಬಾಂಬ್ ಉತ್ಪಾದನೆ, ದೇಶದ್ರೋಹದ ಕೆಲಸಕ್ಕೆ ಯುವಕರಿಗೆ ಪ್ರಚೋದನೆ ಕೊಡುತ್ತಿವೆ. ರಾಜ್ಯದ ಪೊಲೀಸರು, ಗೃಹ ಇಲಾಖೆ ಹಲವರನ್ನು ಬಂಧಿಸಿದರು. ಕೆಲವರನ್ನು ಗಡಿಪಾರು ಮಾಡಿದರು. ಶಿವಮೊಗ್ಗದ ಶಾಂತಿಯನ್ನು ಕದಡುವ ಕೆಲಸ ಮಾಡಲಾಯಿತು ಎಂದು ಆರೋಪಿಸಿದರು.
ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಎಸ್.ರುದ್ರೇಗೌಡ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್.ದತ್ತಾತ್ರಿ, ಅಣ್ಣಪ್ಪ ಉಪಸ್ಥಿತರಿದ್ದರು.
Krushi mela | ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೊಮ್ಮೆ ನೀವು ಬರಲೇಬೇಕು, ಇಲ್ಲಿನ 8 ವಿಶೇಷಗಳೇನು?