
ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಮೂಲೆಕಟ್ಟೆ ಹೆಲಿಪ್ಯಾಡ್ ಬಳಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣದ ವಿಚಾರ ನಡೆಸಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.
ಭದ್ರಾವತಿಯ ಬೊಮ್ಮನಕಟ್ಟೆಯ ಇಮ್ರಾನ್ ಪಾಷಾ(22), ಸೈಯದ್ ರೋಷನ್(38) ಎಂಬುವವರಿಗೆ ಆರು ತಿಂಗಳ ಕಠಿಣ ಕಾರಾಗೃಹ ವಾಸ ಮತ್ತು ₹10 ಸಾವಿರ ದಂಡ ವಿಧಿಸಿ
ಪ್ರಧಾನ ಸಿಜೆ & ಜೆಎಂಎಫ್.ಸಿ ನ್ಯಾಯಾಲಯ ನ್ಯಾಯಧೀಶ ಆರ್.ಯತೀಶ್ ಅವರು ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹಿರಿಯ ಅಧಿಕಾರಿಗಳದಿಢೀರ್ ಭೇಟಿ, ಕಾರಣವೇನು?
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸ್
2020ರ ಸೆಪ್ಟೆಂಬರ್ 27ರಂದು ಭದ್ರಾವತಿ ಗ್ರಾಮಾಂತರ ವೃತ್ತದ ಸಿಪಿಐ ಈ.ಓ.ಮಂಜುನಾಥ್ ಅವರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರ ಬಳಿಯಿಂದ ಅಂದಾಜು ₹6,000 ಮೌಲ್ಯದ 190 ಗ್ರಾಂ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳ ವಿರುದ್ಧ ಎನ್.ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಪ್ರಕರಣದ ತನಿಖಾಧಿಕಾರಿಗಳಾದ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ಪಿಎಸ್.ಐ ಶಿಲ್ಪಾ ನಾಯನೇಗಲಿ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಚ್.ರಂಗಪ್ಪ ವಾದ ಮಂಡಿಸಿದ್ದರು.
₹10 ಕೋಳಿ ಮರಿಗೆ KSRTC ಬಸ್ ನಲ್ಲಿ ₹50 ಟಿಕೆಟ್!, ಲಗೇಜು ದರ ನಿಯಮವೇನು ಹೇಳುತ್ತೆ?