
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ‘ಲಕ್ಷ್ಮೀ ಟಾಕೀಸ್‘ (Lakshmi Talkies ) ಶಿವಮೊಗ್ಗ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಇದರೊಂದಿಗೆ ಭಾವನಾತ್ಮಕ ಸಂಬಂಧವಿದ್ದು, ಅದೀಗ ನೆನಪಾಗಿ ಉಳಿದುಕೊಳ್ಳಲಿದೆ.
ಲಕ್ಷ್ಮೀ ಟಾಕೀಸಿನ ಮಾಲೀಕ ಡಿ.ಲಕ್ಕಪ್ಪ ಅವರು 1984ರಲ್ಲಿ ಹೊಸಮನೆ ಬಡಾವಣೆಯ ಸಮೀಪ ಟಾಕೀಸ್ ಅನ್ನು ಆರಂಭಿಸಿದರು. ನಟಸಾರ್ವಭೌಮ ಡಾ.ರಾಜಕುಮಾರ ಅವರು ಅಭಿನಯದ ಶ್ರೀನಿವಾಸ ಕಲ್ಯಾಣ (srinivas kalyana) ಸಿನಿಮಾ ಪ್ರದರ್ಶನಗೊಂಡಿತ್ತು.
ಇನ್ನೊಂದು ವಿಶೇಷವೆಂದರೆ, ಲಕ್ಷ್ಮೀ ಟಾಕೀಸ್ ಶಿವಮೊಗ್ಗದ ಮೊದಲ ಏರ್ ಕೂಲ್ಸ್ ಆಡಿಟೋರಿಯಂ (air cools auditorium) ಇದಾಗಿತ್ತು. ಇಲ್ಲಿ ಒಟ್ಟು 928 ಆಸನಗಳ ವ್ಯವಸ್ಥೆಯೂ ಇದೆ.
READ | ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೊಮ್ಮೆ ನೀವು ಬರಲೇಬೇಕು, ಇಲ್ಲಿನ 8 ವಿಶೇಷಗಳೇನು?
ಲಕ್ಷ್ಮೀ ಟಾಕೀಸ್ ಹೆಸರು ಬರಲೇನು ಕಾರಣ?
ಟಾಕೀಸ್ ಮಾಲೀಕ ಡಿ.ಲಕ್ಕಪ್ಪ ಅವರ ಮನೆ ದೇವರು ಶ್ರೀ ಹಟ್ಟಿ ಲಕ್ಷ್ಮಮ್ಮ. ಹಾಗೂ ಮನೆಯ ಹಿರಿಯ ಹೆಸರು ಸಹ ಲಕ್ಷ್ಮಮ್ಮ. ಈ ಕಾರಣಕ್ಕಾಗಿ ಟಾಕೀಸ್ ಹೆಸರನ್ನು ಲಕ್ಷ್ಮೀ ಎಂದು ನಾಮಕರಣ ಮಾಡಲಾಗಿದೆ.
ಈ ಥಿಯೇಟರಿಗೆ ಜನ ಹೇಗ್ ಬರ್ತಿದ್ರು ಗೊತ್ತಾ?
ಅದೊಂದು ಕಾಲವಿತ್ತು ಸಿನಿಮಾಗಳನ್ನು ವೀಕ್ಷಿಸುವುದೇ ಒಂದು ಥ್ರಿಲ್. ಈಗಿನಂತೆ, ಓಟಿ ಜಮಾನ ಅದಲ್ಲ.ಹೀಗಾಗಿ, ಚಿತ್ರ ಬಿಡುಗಡೆಯಾಗಿದ್ದೇ ಜನರು ಚಿತ್ರಗಳನ್ನು ವೀಕ್ಷಿಸುವುದಕ್ಕಾಗಿ ಎತ್ತಿನ ಗಾಡಿ, ಟ್ರಾಕ್ಟರ್ ಗಳಲ್ಲಿ ಬರುತ್ತಿದ್ದರು. ವಿಶೇಷವೆಂದರೆ, ರಾತ್ರಿಯಿಡೀ ಕಾಯ್ದು ಬೆಳಗ್ಗೆಯ ಶೋ ನೋಡುತ್ತಿದ್ದರು.
ಹಲವು ದಾಖಲೆಗಳನ್ನು ಬರೆದಿದ್ದ ಟಾಕೀಸ್
ಲಕ್ಷ್ಮೀ ಟಾಕೀಸ್ ಹಲವು ದಾಖಲೆಗಳನ್ನು ಬರೆದಿದೆ. ಡಾ.ವಿಷ್ಣುವರ್ಧನ್ ಮತ್ತು ಸೌಂದರ್ಯ ನಟನೆಯ ಆಪ್ತಮಿತ್ರ ಸಿನಿಮಾವು ರಾಜ್ಯದಾದ್ಯಂತ ಕೆಲವು ಚಿತ್ರಮಂದಿರಗಳಲ್ಲಿ 300 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಅದರಲ್ಲಿ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಸಹ ಒಂದು ಎನ್ನುವ ಹೆಮ್ಮೆ ಇದೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರಮಂದಿರಕ್ಕೆ ಹಲವು ನಟ, ನಟಿಯರು ಭೇಟಿ ನೀಡಿದ್ದಾರೆ. ಪ್ರೇಕ್ಷಕರ ಸಂಭ್ರಮದಲ್ಲಿ ಒಂದಾಗಿದ್ದಾರೆ. ಡಾ.ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ದ್ವಾರಕೀಶ್, ಪ್ರೇಮ್, ಸುದೀಪ್, ದರ್ಶನ್, ಡಾಲಿ ಧನಂಜಯ ಸಹ ಇಲ್ಲಿಗೆ ಆಗಮಿಸಿದ್ದರು.
READ | ಹೋಟೆಲ್’ನಲ್ಲಿ ಲೇಡಿಸ್ ನೈಟ್ ಪಾರ್ಟಿ, ಬಜರಂಗ ದಳ ಕಾರ್ಯಕರ್ತರ ದಾಳಿ, ಏನೇನಾಯ್ತು?
ಪ್ರದರ್ಶನಗೊಂಡ ಕೊನೆ ಚಿತ್ರ ಯಾವುದು? ಥಿಯೇಟರ್ ಬಂದ್‍ಗೇನು ಕಾರಣ?
40 ವರ್ಷಗಳ ಕಾಲ ಸಿನಿ ಪ್ರಿಯರಿಗೆ ರಸದೌತಣ ಉಣಬಡಿಸಿದ ಲಕ್ಷ್ಮೀ ಚಿತ್ರಮಂದಿರವು ಬಂದ್ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ಪ್ರದರ್ಶನಗೊಂಡು ಕೊನೆಯ ಚಿತ್ರ ವಿಕ್ರಾಂತ್ ರೋಣ ಆಗಿದೆ. ಈಗಾಗಲೇ ಥಿಯೇಟರಿನ ಎಲ್ಲ ಉಪಕರಣಗಳನ್ನು ತೆರವುಗೊಳಿಸಲಾಗಿದೆ. ಈ ಜಾಗದಲ್ಲಿ ಮಿನಿ ಮಾಲ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಟಿ ಸೆಂಟರ್ ಮಾಲ್ ಮಾದರಿಯಲ್ಲೇ ಮಾಲ್ ತಲೆಎತ್ತಲಿದೆ. ಇನ್ನೊಂದು ವಿಚಾರ, ಈ ಮಲ್ಟಿ ಸ್ಟೋರ್ ಬಿಲ್ಡಿಂಗ್ ನ ಕೊನೆಯ ಫ್ಲೋರಿನಲ್ಲಿ ಮಲ್ಟಿಪ್ಲೆಕ್ಸ್ ತೆರೆಯಲು ಉದ್ದೇಶಿಸಲಾಗಿದೆ.
King cobra | ಮಲೆನಾಡಿಗರೇ ಎಚ್ಚರ! ಎಲ್ಲೆಡೆ ಶುರುವಾಗಿದೆ ಕಾಳಿಂಗ ಸರ್ಪಗಳ ಮಿಲನ, ಇಲ್ಲಿದೆ ಇಂಟರೆಸ್ಟಿಂಗ್ ಲೇಖನ