ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೊಬೈಲ್ ಕಳೆದುಹೋದರೆ ಭಯಪಡುವ ಅಗತ್ಯವಿಲ್ಲ. ಕಾರಣ, ಜಿಲ್ಲಾ ಪೊಲೀಸ್ ಇಲಾಖೆ (shivamogga police department) ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
READ | ಹತ್ತು ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಗಳ ಸೇವೆ ವಿಸ್ತರಣೆ, ಯಾವ್ಯಾವ ರೈಲು, ಇಲ್ಲಿದೆ ಮಾಹಿತಿ
ಏನದು ತಂತ್ರಜ್ಞಾನ?
ಸಾರ್ವಜನಿಕರ ಮೊಬೈಲ್ ಫೋನ್’ಗಳು ಕಳವು/ ದರೋಡೆ/ ಸುಲಿಗೆ/ ಕಳೆದುಹೋದ ಸಂದರ್ಭದಲ್ಲಿ ಶೀಘ್ರವಾಗಿ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಹಿಂದಿರುಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಿಇಐಆರ್ (CEIR- Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಶೀಘ್ರವಾಗಿ ಮೊಬೈಲ್ ಗಳನ್ನು ಪತ್ತೆ ಹಚ್ಚಬಹುದಾಗಿದೆ.
ಮೊಬೈಲ್ ಫೋನ್ ಗಳು ಕಳವು, ದರೋಡೆ, ಸುಲಿಗೆ, ಕಳೆದು ಹೋದ ಸಂದರ್ಭದಲ್ಲಿ, ಸಾರ್ವಜನಿಕರು CEIR Portalಗೆ ಲಾಗಿನ್ ಆಗಿ, ದೂರನ್ನು ದಾಖಲಿಸಲು ಕೋರಲಾಗಿದೆ.
– ಜಿ.ಕೆ.ಮಿಥುನ್ ಕುಮಾರ್, ಎಸ್.ಪಿ
ಪೊಲೀಸ್ ನಿರೀಕ್ಷಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ತಂಡವು CEIR Portal ಮೂಲಕ ಈ ರೀತಿಯ ಒಟ್ಟು 3 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿರುತ್ತಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun Kumar) ಅವರ ಸಮ್ಮುಖದಲ್ಲಿ ಪತ್ತೆ ಮಾಡಲಾದ ಮೊಬೈಲ್ ಗಳನ್ನು, ಮಾಲೀಕರಾದ ಹನುಮಂತ ರಾವ್, ಮಿಥುನ್ ಮತ್ತು ಶ್ರೀನಿಧಿ ಅವರಿಗೆ ಹಿಂದಿರುಗಿಸಲಾಯಿತು.
ಕರಾವಳಿ, ಚಿಕ್ಕಮಗಳೂರಿನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆ, ಆರಗ ಜ್ಞಾನೇಂದ್ರ ಹೇಳಿದ್ದೇನು?