ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದಂಡದ ಮೊತ್ತ ಪಾವತಿಸುವ ಕಾಲಾವಕಾಶವನ್ನು ಮುಂದುವರಿಸಿದ್ದು, ಫೆಬ್ರವರಿ ತಿಂಗಳಿನಲ್ಲಿ ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ದಂಡದ ಮೊತ್ತವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಶೇ.50ರಷ್ಟು ದಂಡ ರಿಯಾಯಿತಿ
ಫೆ.3 ರಿಂದ 11ರ ಒಳಗಾಗಿ ಪಾವತಿ ಮಾಡಿದ್ದಲಿ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು. ಇದೇ ರೀತಿ ಮತ್ತೊಮ್ಮೆ ಫೆ.11ರವರೆಗೆ ದಾಖಲಾದ ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಮಾತ್ರ ಆನಯವಾಗುವಂತೆ ಮಾ.4ರಿಂದ 18ರವರೆಗೆ 15 ದಿನಗಳ ಕಾಲ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಸರ್ಕಾರವು ಆದೇಶಿಸಿರುತ್ತದೆ.
ಆದ್ದರಿಂದ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನಗಳ ಚಾಲಕರು/ ಮಾಲೀಕರುಗಳು ಮಾ.4ರಿಂದ 18ರ ಒಳಗಾಗಿ ದಂಡದ ಮೊತ್ತವನ್ನು ಪಾವತಿಸಿದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಪಡೆದು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿರುತ್ತದೆ.
ಬಾಕಿ ಇರುವ ದಂಡದ ವಿವರ ವೀಕ್ಷಿಸುವ, ಪಾವತಿಸುವ ವಿಧಾನ
- ಕರ್ನಾಟಕ ಒನ್ ವೆಬ್ ಸೈಟ್ ಗೆ ಭೇಟಿ ನೀಡಿ, ವಾಹನದ ನೋಂದಣಿ ಸಂಖ್ಯೆ / ನೋಟೀಸ್ ನಂಬರ್ ಅನ್ನು ನಮೂದಿಸಿ
- ವಿವರವನ್ನು ಪಡೆದು ಬಾಕಿ ಇರುವ ದಂಡವನ್ನು ಪಾವತಿಸಬಹುದಾಗಿದೆ.
- ಶಿವಮೊಗ್ಗ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಬಾಕಿ ಇರುವ ದಂಡವನ್ನು ಪಾವತಿಸಬಹುದು.
- ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ಮೊದಲನೆ ಮಹಡಿಯಲ್ಲಿನ ಟ್ರಾಫಿಕ್ ಆಟೋಮೇಷನ್ ಸೆಂಟರ್ ನಲ್ಲಿಯೂ ಸಹ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡದ ಮೊತ್ತವನ್ನು ಪಾವತಿಸ ಬಹುದಾಗಿರುತ್ತದೆ.
- ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಬಾಕಿ ಇರುವ ದಂಡವನ್ನು ಮೊತ್ತವನ್ನು ಪಾವತಿಸ ಬಹುದಾಗಿರುತ್ತದೆ.
- ಸಂಚಾರ ಪೊಲೀಸ್ ಠಾಣೆಗಳ ಕರ್ತವ್ಯ ನಿರತ ಎಎಸ್ಐ, ಪಿಎಸ್ಐ, ಸಿಪಿಐರವರ ಬಳಿ ಇರುವ ಟ್ರಾಫಿಕ್ ಸ್ಮಾಟ್ ಫೈನ್ ಡಿವೈಸ್ ಗಳಲ್ಲಿ, ಬಾಕಿ ಇರುವ ದಂಡವನ್ನು ಪಾವತಿಸಲು ಅವಕಾಶವಿದೆ. ಅವರನ್ನು ಭೇಟಿ ಮಾಡಿ ವಾಹನದ ನೋಂದಣಿ ಸಂಖ್ಯೆಯನ್ನು ಒದಗಿಸಿ ಮಾಹಿತಿಯನ್ನು ಪರಿಶೀಲಿಸಿ ಸ್ಥಳದಲ್ಲಿಯೇ ದಂಡದ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08182-240600, ಶಿವಮೊಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-261417 ಮತ್ತು ಭದ್ರಾವತಿ ಸಂಚಾರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08282-276314 ಅನ್ನು ಸಂಪರ್ಕಿಸಬಹುದಾಗಿದೆ.
ಆಗುಂಬೆಯಲ್ಲಿ ಪ್ರಾಣಿಗಳಿಗೆ ಆಹಾರ ತಿನ್ನಿಸಿದರೆ ಬೀಳುತ್ತೆ ಫೈನ್, ದಂಡದ ಪಟ್ಟಿಗಾಗಿ ಕ್ಲಿಕ್ ಮಾಡಿ